ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರುಗದ್ದೆಯಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ‘ಕೋಟಿ-ಚೆನ್ನಯ’ ಜೋಡುಕರೆ ಕಂಬಳದ ದಿನ ನಿಗದಿಯಾಗಿದ್ದು, ಫೆ.4 ರಂದು 30ನೇ ವರ್ಷದ ಪುತ್ತೂರು ‘ಕೋಟಿ-ಚೆನ್ನಯ’ ಜೋಡುಕರೆ ಕಂಬಳ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸೂಚನೆಯಂತೆ ಪುತ್ತೂರು ಕಂಬಳ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಯವರ ಸಲಹೆ ಮೇರೆಗೆ ಪುತ್ತೂರು ‘ಕೋಟಿ ಚೆನ್ನಯ’ ಜೋಡುಕರೆ ಕಂಬಳವು 2023ನೇ ಫೆ.4 ಶನಿವಾರದಂದು ನಡೆಸುವುದೆಂದೂ ನಿಗದಿ ಪಡಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ಬಾರಿಯ ಪುತ್ತೂರು ಕಂಬಳವು ಫೆಬ್ರವರಿಯಲ್ಲಿ ನಡೆಯಲಿದೆ..

























