ಪುತ್ತೂರು: ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಪರ್ಪುಂಜದಲ್ಲಿ ನಡೆದಿದೆ.

ಕುಂಬ್ರದಿಂದ ಪುತ್ತೂರಿಗೆ ತೆರಳುತ್ತಿದ್ದ ಮಡಿಕೇರಿಯ ಲೋಕೇಶ್ ಎಂಬವರು ಚಲಾಯಿಸುತ್ತಿದ್ದ ಸ್ವಿಫ್ಟ್ ಕಾರಿಗೆ ಹಿಂಬದಿಯಿಂದ ಬರುತ್ತಿದ್ದ ರಾಮಕುಂಜದ ದೀಕ್ಷಿತ್ ಎಂಬವರು ಚಲಾಯಿಸುತ್ತಿದ್ದ ಸೆಲಾರಿಯೋ ಕಾರು ಡಿಕ್ಕಿ ಹೊಡೆದಿದೆ.
ಘಟನೆಯಿಂದಾಗಿ ಸೆಲಾರಿಯೋ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ..


























