ಎಸ್.ಬಿ.ಐ ನಲ್ಲಿ ಪ್ರೊಬೇಷನರಿ ಆಫೀಸರ್ – 1673 ಹುದ್ದೆಗಳು (ವೇತನ 36000 – 63840), ಜೂನಿಯರ್ ಅಸೋಸಿಯೇಟ್ಸ್ – 5008 ಹುದ್ದೆಗಳು (ವೇತನ 17900 – 47920) ಮತ್ತು ಸಶಸ್ತ್ರ ಪೊಲೀಸ್ ನೇಮಕಾತಿ 3064 ಹುದ್ದೆಗಳು (ವೇತನ 23500 – 47650). ಸದ್ಯ ಎಸ್.ಬಿ.ಐ ಬ್ಯಾಂಕ್ ನಲ್ಲಿ ಕರೆಯಲಾಗಿರುವ ಪ್ರೊಬೇಷನರಿ ಆಫೀಸರ್ ಮತ್ತು ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗಳಿಗೆ ಯಾವುದೇ ಪದವಿ ಮುಗಿಸಿರುವ ಅಥವಾ 2022ರ ಸಾಲಿನಲ್ಲಿ ಅಂತಿಮ ಪದವಿ ಪರೀಕ್ಷೆ ಬರೆದಿರುವವರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ವಯಸ್ಸಿನ ಮಿತಿ 21 ರಿಂದ 35 ವರ್ಷ ಆಗಿದ್ದು, ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗಳಿಗೆ 20 ರಿಂದ 33 ವರ್ಷ ವಯೋಮಿತಿ ಆಗಿದೆ.
ಕರ್ನಾಟಕ ಸಶಸ್ತ್ರ ಪೊಲೀಸ್ ನೇಮಕಾತಿಗೆ 10 ನೇ ತರಗತಿ ಉತ್ತೀರ್ಣರಾಗಿರುವ ಯುವಕರಿಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, 18 ರಿಂದ 27 ವಯಸ್ಸಿನವರೆಗೆ ಅರ್ಜಿ ಸಲ್ಲಿಸಬಹುದು. ಎತ್ತರ 168cm ಇರತಕ್ಕದ್ದು. ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯು ಬ್ಯಾಂಕಿಂಗ್ ಮತ್ತು ಪೊಲೀಸ್ ನೇಮಕಾತಿ ಅಲ್ಲದೇ ಪಿಡಿಒ , ಎಸ್.ಡಿ.ಎ , ಎಫ್.ಡಿ.ಎ ಯಿಂದ ಹಿಡಿದು ಕೆಎಎಸ್, ಐಎಎಸ್ ವರೆಗಿನ ಎಲ್ಲಾ ನೇಮಕಾತಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಕಳೆದ 2 ವರ್ಷಗಳಿಂದ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಇಂಡಿಯನ್ ಪೋಸ್ಟಲ್, ಭಾರತೀಯ ಸೇನೆ, ಬ್ಯಾಂಕಿಂಗ್, ಕೆ ಎಂ ಎಫ್, ಶಿಕ್ಷಕರ ನೇಮಕಾತಿ ಸೇರಿದಂತೆ ಹದಿನಾರು ವಿದ್ಯಾರ್ಥಿಗಳು ವಿವಿಧ ಇಲಾಖೆಗಳಿಗೆ ಆಯ್ಕೆಯಾಗಿರುತ್ತಾರೆ.
ತರಬೇತಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಹತ್ತನೇ ತರಗತಿಯಿಂದ ಪದವಿ ವರೆಗೆ ವಿದ್ಯಾಭ್ಯಾಸ ಮುಗಿಸಿರುವ ಪುರುಷ ಯಾ ಮಹಿಳಾ ಅಭ್ಯರ್ಥಿಗಳು ಅವರವರ ವಿದ್ಯಾರ್ಹತೆಗೆ ಅನುಗುಣವಾಗಿ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ. ನೇರ ತರಗತಿಗಳು ಬೆಳಗ್ಗೆ 9.30 ರಿಂದ ಮಧ್ಯಾಹ್ನ 1 ರ ವರೆಗೆ, ಆನ್ಲೈನ್ ತರಗತಿಗಳು ವಾರದ 5 ದಿನ ಸಾಯಂಕಾಲ 7 ರಿಂದ 9 ರ ವರೆಗೆ ನಡೆಯಲಿರುವುದು. ಪ್ರವೇಶಾತಿ ಪಡೆಯಲು ಅಕ್ಟೋಬರ್ 15 ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ : ವಿದ್ಯಾಮಾತಾ ಅಕಾಡೆಮಿ, ಹಿಂದೂಸ್ತಾನ್ ಕಾಂಪ್ಲೆಕ್ಸ್, ಒಂದನೇ ಮಹಡಿ, ಎಪಿಯಂಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ ಪುತ್ತೂರು ದ.ಕ 574201
ಫೋನ್ ನಂ. 9620468869 / 9148935808 ಅನ್ನು ಸಂಪರ್ಕಿಸಬಹುದು.


























