ಪುತ್ತೂರು: ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಕಾಸರಗೋಡು ಮಂಜೇಶ್ವರ ತಾಲೂಕು ಹೊಸಂಗಡಿ ಮಿಜಿರಪಲ್ಲ ಮುಸ್ತಫ್ ಎಂಬವರ ಪುತ್ರ ಮಹಮ್ಮದ್ ಶಫೀಕ್ ಬಂಧಿತ ಆರೋಪಿ.

ಪಾಟ್ರಕೋಡಿಯಲ್ಲಿ ಭಾರಿ ಪ್ರಮಾಣದ ಗಾಂಜಾ ಪ್ರಕರಣ
ಪತ್ತೆ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಈ
ಪೈಕಿ 2ನೇ ಆರೋಪಿ ಕಾಸರಗೋಡು ಮಂಜೇಶ್ವರ ಹೊಸಂಗಡಿ
ನಿವಾಸಿ ಮಹಮ್ಮದ್ ಶಫೀಕ್ ನ್ಯಾಯಾಲಯದಲ್ಲಿ
ತಲೆಮರೆಸಿಕೊಂಡಿದ್ದ. ವಿಚಾರಣೆಗೆ ಹಾಜರಾಗದ ನ್ಯಾಯಾಲಯ ಆರೋಪಿ ಮೇಲೆ ವಾರಂಟ್ ಜಾರಿ ಮಾಡಿತ್ತು.
ತನಿಖೆ ಕೈಗೆತ್ತಿಕೊಂಡ ಪುತ್ತೂರು ಪೊಲೀಸರು ದ.ಕಜಿಲ್ಲಾ ಎಸ್ಪಿ
ಋಷಿಕೇಶ್ ಸೋನಾವಣೆ, ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ
ಅವರ ನಿರ್ದೇಶನದಂತೆ ಪುತ್ತೂರು ನಗರ ಪೊಲೀಸ್ ಠಾಣೆ
ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ,
ಎಸ್.ಐ ಶ್ರೀಕಾಂತ್ ರಾಥೋಡ್ ಅವರ ನೇತೃತ್ವದಲ್ಲಿ, ಎ.ಎಸ್.ಐ
ಚಂದ್ರ ಮತ್ತು ಹೆಡ್‌ಕಾನ್‌ಸ್ಟೇಬಲ್ ಪರಮೇಶ್ವರ್ ಅವರು
ಆರೋಪಿ ಮಹಮ್ಮದ್ ಶಫೀಕ್ ನನ್ನು ಮಂಜೇಶ್ವರದಲ್ಲಿ
ಬಂಧಿಸಿ ಮಂಗಳೂರು 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ
ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ
ಬಂಧನ ವಿಧಿಸಿದೆ.

























