ಪುತ್ತೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿ
ಅಂಗವಾಗಿ ಇರ್ದೆ-ಬೆಟ್ಟಂಪಾಡಿ ವಲಯ ಕಾಂಗ್ರೆಸ್‌ನಿಂದ ಗಾಂಧಿ ಪಥದಲ್ಲಿ ದ್ವೇಷಮುಕ್ತ ಭಾರತಕ್ಕಾಗಿ ಗಾಂಧಿ ಪಥದಲ್ಲಿ ಹೆಜ್ಜೆ ಹಾಕೋಣ ಎಂಬ ಧ್ಯೇಯ ವಾಕ್ಯದಡಿಯಲ್ಲಿ ‘ಗಾಂಧಿ ನಡಿಗೆ’ಯು ಅ.10 ರಂದು ಮಧ್ಯಾಹ್ನ 3 ಗಂಟೆಗೆ ಇರ್ದೆ- ಬೆಟ್ಟಂಪಾಡಿಯಲ್ಲಿ ನಡೆಯಲಿದೆ.
ಗಾಂಧಿ ನಡಿಗೆಯು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಕಚೇರಿಯ ಬಳಿಯಿಂದ ಹೊರಟು ಇರ್ದೆ ಗಾಂಧಿಕಟ್ಟೆಯ ತನಕ ನಡೆಯಲಿದೆ.
ತಾಲೂಕು, ಜಿಲ್ಲಾ ಮಟ್ಟದ ಪಕ್ಷದ ವಿವಿಧ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಯೋಜಕ ನವೀನ್ ರೈ ಚೆಲ್ಯಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























