ಪುತ್ತೂರಿನ ಕೂರ್ನಡ್ಕದ ‘ಮಾಧವ ಪ್ರಭು’ ರವರಿಗೆ ಕಲರ್ಸ್ ಕನ್ನಡದ ‘ಅನುಬಂಧ ಅವಾರ್ಡ್ಸ್ 2022’ ನ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ರವರ ಸವಿನೆನಪಿನಲ್ಲಿ “ಕಲರ್ಸ್ ಕನ್ನಡಿಗ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಕೂರ್ನಡ್ಕ ಸುತ್ತಮುತ್ತಲ ನೂರಾರು ಬಡ ಮಕ್ಕಳಿಗೆ ವಿದ್ಯಾಭ್ಯಾಸ
ಕ್ಕೆ ಪುಸ್ತಕಗಳನ್ನು ಒದಗಿಸಿದ್ದಕ್ಕಾಗಿ ಹಾಗೂ ಹತ್ತಾರು ದಾನಿಗಳ ಮುಖಾಂತರ ಮಕ್ಕಳ ಕನಸನ್ನು ನನಸು ಮಾಡಲು ಸಹಾಯ ಮಾಡಿದ್ದಕ್ಕಾಗಿ, ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ರವರ ಸವಿನೆನಪಿನಲ್ಲಿ “ಕಲರ್ಸ್ ಕನ್ನಡಿಗ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿದೆ.
ಬೆಂಗಳೂರಿನ ನಾಗರಬಾವಿ ಅಕ್ಷಯ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ರವರ ಸಹೋದರ ರಾಘವೇಂದ್ರ ರಾಜ್ ಕುಮಾರ್ ರವರು ಪ್ರಶಸ್ತಿ ಪ್ರಧಾನ ಮಾಡಿದರು.

ಕಲರ್ಸ್ ಕನ್ನಡ ವಾಹಿನಿ ಹಮ್ಮಿಕೊಂಡ ಅನುಬಂಧ ಕಾರ್ಯಕ್ರಮದಲ್ಲಿ ಈ ವರ್ಷದಿಂದ ದಿ. ಪುನೀತ್ ರಾಜ್ ಕುಮಾರ್ ರವರ ಹೆಸರಿನಲ್ಲಿ ‘ಕಲರ್ಸ್ ಕನ್ನಡಿಗ’ ಪ್ರಶಸ್ತಿ ನೀಡಲು ಆರಂಭಿಸಿದೆ.

ಮಾಧವ ಪ್ರಭು ರವರು ಹಲವು ವರುಷಗಳಿಂದ ಕೂರ್ನಡ್ಕದಲ್ಲಿ ಪುಸ್ತಕ, ಪೆನ್ನು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಪೂರಕವಾಗುವಂತಹ ಪುಸ್ತಕ ಮಳಿಗೆಯನ್ನು ನಡೆಸುತ್ತಿದ್ದು, ತಮ್ಮ ಕೈಲಾದ ಮಟ್ಟಿಗೆ ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಪುಸ್ತಕಗಳನ್ನು ಹಾಗೂ ಹತ್ತಾರು ದಾನಿಗಳ ಮೂಲಕ ಮಕ್ಕಳ ಕನಸಿನ ಸಾಕಾರಕ್ಕೆ ಸಹಾಯವನ್ನು ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ..


























