ಮಂಗಳೂರು: ಪ್ರೀತಿಸಿ ವರ್ಷಗಳ ಹಿಂದೆ ಮದುವೆಯಾಗಿದ್ದ ನವದಂಪತಿ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾದ ಘಟನೆ ಮಂಗಳೂರು ನಗರದ ಮರೋಳಿಯ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.
ಮೃತರನ್ನು ಮೂಲತಃ ಬೆಳಗಾವಿ ನಿವಾಸಿ ಮಲ್ಲಿಕಾರ್ಜುನ(34) ಮತ್ತು ಅವರ ಪತ್ನಿ ಸೌಮ್ಯ(35) ಎಂದು ಗುರುತಿಸಲಾಗಿದೆ.

ಒಂದು ವರ್ಷದ ಹಿಂದಷ್ಟೆ ಇವರು ಮದುವೆಯಾಗಿದ್ದರು ಎನ್ನಲಾಗುತ್ತಿದ್ದು, ಮರೋಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.
ಮಲ್ಲಿಕಾರ್ಜುನ ಆನ್ಲೈನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದು, ಮಂಗಳೂರಿನ ನಿವಾಸಿ ಸೌಮ್ಯಳನ್ನು ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ. ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


























