ಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಅ.10 ರಂದು ಶಾರದಾ ಪೂಜೆಯನ್ನು ಆಚರಿಸಲಾಯಿತು.

ಸಂಸ್ಥೆಯ ಸಂಚಾಲಕರಾದ ಭಾಸ್ಕರ್ ಆಚಾರ್ ಹಿಂದಾರ್ ರವರು ದೇವಿ ಕವಚ ಸ್ತೋತ್ರ ಪಠಿಸುವ ಮೂಲಕ ಸರಸ್ವತಿ ದೇವಿಯ ಆರಾಧನೆ ನಡೆಸಿ ಶ್ರೀದೇವಿಯು ಎಲ್ಲರಿಗೂ ಸನ್ಮoಗಳವನ್ನು
ಉಂಟುಮಾಡುವಂತೆ ಹಾರೈಸಿದರು.

ಶಾಲಾ ಮಕ್ಕಳಿಂದ ಭಜನೆ ಕಾರ್ಯಕ್ರಮ ಜರುಗಿತು. ಶಿಕ್ಷಕ – ಶಿಕ್ಷಕೇತರರು ಹಾಗೂ ವಿದ್ಯಾರ್ಥಿಗಳಿಂದ ಸರಸ್ವತಿ ದೇವಿಗೆ ಪುಷ್ಪರ್ಚನೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್ ಕೆದಿಲಾಯ ಹಾಗೂ ಶಾಲಾ ಮುಖ್ಯೋಪಾಧ್ಯಾಯನಿ ಜಯಮಾಲಾ ವಿ ಎನ್ ರವರು ಉಪಸ್ಥಿತರಿದ್ದರು.




























