ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ವಾರ್ಷಿಕ ಸಭೆಯು ಅ.9 ರಂದು ಸಂಘದ ನಿವೇಶನದಲ್ಲಿ ನಡೆಸಲಾಯಿತು.
ಸಂಘದ ಎಲ್ಲಾ ಸದಸ್ಯರು ಭಾಗವಹಿಸಿದ್ದು, ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಘದ ಗೌರವ ಸಲಹೆಗಾರರಾಗಿ ಅರುಣ್ ವಿಟ್ಲ, ನಾಗೇಶ್ ಬಸವನಗುಡಿ ಮತ್ತು ರವಿಶಂಕರ್ ವಿಟ್ಲ ರನ್ನು ಆರಿಸಲಾಯಿತು. ಗೌರವಾಧ್ಯಕ್ಷರಾಗಿ ಹರೀಶ್ ಎ ವಿಟ್ಲ,ಅಧ್ಯಕ್ಷರಾಗಿ ತಾರಾನಾಥ್ ನೆಕ್ಕರೆಕಾಡು,ಉಪಾಧ್ಯಕ್ಷರಾಗಿ ಜಗದೀಶ ನೆಕ್ಕರೆಕಾಡು, ಪ್ರಧಾನ ಕಾರ್ಯದರ್ಶಿಯಾಗಿ ಶರತ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ಪ್ರೀತೇಶ್ ವಿಟ್ಲ, ಕೋಶಾಧಿಕಾರಿಯಾಗಿ ಜೀವನ್ ವಿಟ್ಲ, ಸಾಮಾಜಿಕ ಜಾಲತಾಣ ನಿರ್ವಾಹಕರಾಗಿ ರಾಹುಲ್ ಶೆಣೈ, ಕ್ರೀಡಾ ಕಾರ್ಯದರ್ಶಿಯಾಗಿ ವಿಶ್ವನಾಥ್ ಅಳಿಕೆ ಸಹ ಕ್ರೀಡಾಕಾರ್ಯದರ್ಶಿಯಾಗಿ ಆದರ್ಶ ರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ವೇಳೆ ಪುತ್ತೂರು ಮಂಡಲ ಬಿಜೆಪಿ ಉಪಾಧ್ಯಕ್ಷ ಹಾಗೂ ವಿಟ್ಲ ಬಿಜೆಪಿ ಮಹಾಶಕ್ತಿಕೆಂದ್ರದ ಅಧ್ಯಕ್ಷರಾದ ಅರುಣ್ ವಿಟ್ಲ ಉಪಸ್ಥಿತರಿದ್ದರು.




























