ಮೂಡಬಿದ್ರೆ: ಕಂಬಳ ಕ್ಷೇತ್ರದ ದಿಗ್ಗಜ, ಇರುವೈಲ್ ಪಾಣಿಲದ ಯಜಮಾನ, ಮೂಡಬಿದ್ರೆ ಇರುವೈಲು ಗ್ರಾಮದ ಪಾಣಿಲ ಬಾಡ ಪೂಜಾರಿ (82) ಅ.11 ರಂದು ನಿಧನರಾದರು.

ಪ್ರಗತಿಪರ ಕೃಷಿಕರಾಗಿದ್ದ ಬಾಡ ಪೂಜಾರಿ ರವರು ಸುಮಾರು 23 ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಇವರ ಕಂಬಳದ ಕೋಣಗಳು ನೇಗಿಲು ಕಿರಿಯ
ಮತ್ತು ಹಿರಿಯ ವಿಭಾಗದಲ್ಲಿ ದಾಖಲೆ ಸಂಖ್ಯೆಯಲ್ಲಿ ಬಹುಮಾನ ಪಡೆದಿವೆ.

ಇವರ ತಾಟೆ ಮತ್ತು ಬೊಟ್ಟಿಮಾರ್ ಕಂಬಳ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಕೋಣಗಳಾಗಿದೆ.

ಉಸೇಲ್ ಬೋಲ್ಡ್ ಖ್ಯಾತಿಯ ಕಂಬಳ ಓಟಗಾರ ಶ್ರೀನಿವಾಸ ಗೌಡ ಹಾಗೂ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಆನಂದ ಅವರು ಇವರ ಗರಡಿಯಲ್ಲೇ ಬೆಳೆದು ಪ್ರಸಿದ್ಧಿಗೆ ಬಂದವರಾಗಿದ್ದಾರೆ.

ಕಂಬಳ ಕೂಟದಲ್ಲಿ ಸೋಲು ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸುತ್ತಿದ್ದ ಮೇರು ವ್ಯಕ್ತಿತ್ವ ಅವರದ್ದಾಗಿದ್ದು, ಸರಳ ಸಜ್ಜನಿಕೆ, ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದ ಕಂಬಳ ಕ್ಷೇತ್ರದ ಅಪೂರ್ವ ಯಜಮಾನ ಬಾಡ ಪೂಜಾರಿಯವರಾಗಿದ್ದರು.

























