ಕಾಂತಾರ ಸಿನಿಮಾ 11 ದಿನದಲ್ಲಿ 50 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿ ಬಾಕ್ಸ್ ಆಫೀಸ್ನಲ್ಲಿ ಸಖತ್ತಾಗಿ ಓಡುತ್ತಿದೆ. ಶೀಘ್ರ ಸಿನಿಮಾ 100 ಕೋಟಿ ಕ್ಲಬ್ ಸೇರೋದ್ರಲ್ಲಿ ಡೌಟ್ ಇಲ್ಲ ಎನ್ನುತ್ತಿದ್ದಾರೆ ಸಿನಿಮಾ ಫ್ಯಾನ್ಸ್.
ರಿಷಬ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿದ ಕಾಂತಾರ ಸಿನಿಮಾ ಥಿಯೇಟರ್ನಲ್ಲಿ ಸೂಪರ್ ಹಿಟ್ ಆಗಿದೆ. ಬಾಕ್ಸ್ ಆಫೀಸ್ ರೇಸ್ ಮುಂದುವರಿಸಿದೆ.
ಕಾಂತಾರ ಸಿನಿಮಾ ಸಖತ್ ಹಿಟ್ ಆಗಿದೆ. ಪ್ರೇಕ್ಷಕರ ವಿಮರ್ಶೆಯಿಂದಲೇ ವೈರಲ್ ಆದ ಸಿನಿಮಾ ಬಗ್ಗೆ ಅನ್ಯ ಭಾಷೆಗಳಿಂದಲೂ ರಿವ್ಯೂ ಬರುತ್ತಿದೆ. ಸಿನಿಮಾ ವ್ಯಾಪಕ ಮೆಚ್ಚುಗೆ ಗಳಿಸುವುದರ ಜೊತೆ ಕಲೆಕ್ಷನ್ ವಿಚಾರದಲ್ಲೂ ಮುಂದೆ ಇದೆ.
ದಿನ 1: ರೂ 1.95 ಕೋಟಿ, ದಿನ 2: ರೂ 2.65 ಕೋಟಿ, ದಿನ 3: ರೂ 4.9 ಕೋಟಿ, ದಿನ 4: ರೂ 3.7 ಕೋಟಿ. ದಿನ 5: ರೂ 5 ಕೋಟಿ, ದಿನ 6: ರೂ 7.1 ಕೋಟಿ, ದಿನ 7: ರೂ 5 ಕೋಟಿ, ದಿನ 8: ರೂ 5.8, ಕೋಟಿ, ದಿನ 9 : ರೂ 8.15 ಕೋಟಿ, ದಿನ 10: ರೂ 9.64 ಕೋಟಿ, ದಿನ 11: ರೂ 3.50 ಕೋಟಿ, ಒಟ್ಟು 11 ದಿನಗಳ ಕಲೆಕ್ಷನ್: ರೂ 57.11 ಕೋಟಿ ರೂ.
ಸಿನಿಮಾದಲ್ಲಿ ಕರಾವಳಿಯ ದೃಶ್ಯ ವೈಭವ, ಸಿಸರ್ಗ ಸೌಂದರ್ಯ, ಪ್ರಕೃತಿ, ಸಂಪ್ರದಾಯ, ಆಚರಣೆ ಎಲ್ಲವನ್ನೂ ಈ ಸಿನಿಮಾದಲ್ಲಿ ಕಾಣಬಹುದು. ರಿಷಭ್ ಶೆಟ್ಟಿ ದೈವದ ರೂಪದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದ ಕೊನೆಯ 20 ನಿಮಿಷಗಳು ಪ್ರೇಕ್ಷಕನಿಗೆ ಭಾರೀ ಮೆಚ್ಚುಗೆಯಾಗಿದೆ. ಕಾಂತಾರದಲ್ಲಿ ರಿಷಭ್ ಶೆಟ್ಟಿ ಜೊತೆ ನಾಯಕಿಯಾಗಿ ಸಪ್ತಮಿ ಗೌಡ, ಅಚ್ಯುತ ಕುಮಾರ್, ಮಾನಸಿ ಸುಧೀರ್ ಕೂಡಾ ನಟಿಸಿದ್ದಾರೆ.

























