ಮಂಜೇಶ್ವರ: ಮಜೀರ್ ಪಳ್ಳ ಬಲಿಪಗುಳಿ ನಿವಾಸಿ ಸಿನಾನ್ (28)ಪ್ರವಾಸಕ್ಕೆ ತೆರಳಿದ ವೇಳೆ ಮಂಜಿನ ಒತ್ತಡದಿಂದಾಗಿ ಹಿಮಾಚಲ ಪ್ರದೇಶದಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಬಲಿಪಗುಳಿ ಅಬ್ದುಲ್ಲ -ಪಾತಿಮ ದಂಪತಿಗಳ ಪುತ್ರನಾಗಿದ್ದ ಸಿನಾನ್ ಕತ್ತಾರ್ ನಲ್ಲಿ ಸರಕಾರಿ ಕೆಲಸದಲ್ಲಿದ್ದನು.
ಆರು ತಿಂಗಳ ಹಿಂದೆ ಊರಿಗೆ ತಲುಪಿದ್ದು, ಕಳೆದ ತಿಂಗಳ 20 ರಂದು ಮನೆಯಿಂದ ಪ್ರವಾಸಕ್ಕೆ ಎಂಬುದಾಗಿ ತಿಳಿಸಿ ತೆರಳಿದ್ದನು.15 ದಿನಗಳ ಹಿಂದೆಯೆ ಸಿನಾನ್ ಮೊಬೈಲ್ ಸ್ವಿಚ್ ಆಪ್ ಆಗಿದ್ದು, ಸಿನಾನ್ ಮಜೀರ್ಪಳ್ಳ ಡ್ರೀಂ ಬೋಯ್ಸ್ ಕ್ಲಬ್ ನ ಸದಸ್ಯ ನಾಗಿದ್ದು, ಸಿನಾನ್ ನಿಧನದ ಸುದ್ದಿ ಕೇಳಿ ವರ್ಕಾಡಿ ಪ್ರದೇಶದ ಜನತೆ ದು:ಖದಿಂದ ತಲ್ಲಣಗೊಂಡಿದ್ದಾರೆ.
























