ಮಂಗಳೂರು: ಮಂದಾರಬೈಲು ನಿವಾಸಿ ಜಯಾನಂದ್ ಆಚಾರ್ಯ ಅವರ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕುಂಜತ್ತಬೈಲು ದೇವಿನಗರದ ರಾಜೇಶ್ ಪೂಜಾರಿ (31) ಬಂಧಿತ ಆರೋಪಿ.

ಜಯಾನಂದ ಆಚಾರ್ಯ ರವರ ಮೃತದೇಹ ಕಳೆದ ಶನಿವಾರ ಪತ್ತೆಯಾಗಿತ್ತು. ಬಳಿಕ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಇದೊಂದು ಕೊಲೆ ಪ್ರಕರಣವೆಂದು ಗೊತ್ತಾಗಿತ್ತು. ಹೀಗಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಯಾನಂದ ನವರಾತ್ರಿ ವೇಳೆ ವೇಷ ಧರಿಸುತ್ತಿದ್ದರು. ಶನಿವಾರ ಅವರ ಮೃತದೇಹವು ಕುತ್ತಿಗೆಗೆ ಹಗ್ಗ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
























