ನವದೆಹಲಿ: ಕಾಶ್ಮೀರದ ಅನಂತನಾಗ್ನಲ್ಲಿ ಭಯೋತ್ಪಾದಕರ ಮೇಲಿನ ಎನ್ಕೌಂಟರ್ನಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೇನಾ ಶ್ವಾನ ‘ಜೂಮ್’ ಗುರುವಾರ ಸಾವನ್ನಪ್ಪಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
54 ಎಎಫ್ವಿಹೆಚ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೂಮ್ ಹೆಸರಿನ ಸೇನಾ ಶ್ವಾನ ಇಂದು ಮಧ್ಯಾಹ್ನ ಮೃತಪಟ್ಟಿದೆ.
ಅನಂತನಾಗ್ನ ಕೋಕರ್ನಾಗ್ನಲ್ಲಿ ನಡೆದ ಯುದ್ಧ ಕಾರ್ಯಾಚರಣೆಯಲ್ಲಿ ‘ಜೂಮ್’ ಭಯೋತ್ಪಾದಕರ ಮೇಲೆ ದಾಳಿ ಮಾಡಿತ್ತು. ಈ ವೇಳೆ ಎರಡು ಗುಂಡು ತಗುಲಿ ಗಂಭೀರ ಗಾಯಗೊಂಡಿತ್ತು. ತಕ್ಷಣ ಶ್ವಾನವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.
ಗುಂಡೇಟು ಬಿದ್ದರೂ ಜೂಮ್ ಶ್ವಾನ ಉಗ್ರರ ಮೇಲೆ ದಾಳಿ ಮುಂದುವರಿಸಿತ್ತು. ಭಯೋತ್ಪಾದಕರನ್ನು ನಿಗ್ರಹಿಸುವಲ್ಲಿಯೂ ಯಶಸ್ವಿಯಾಗಿತ್ತು.


























