ಪುತ್ತೂರು: ಬಿಜೆಪಿ ಹಿರಿಯ ಕಾರ್ಯಕರ್ತರೋರ್ವರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಅ.14 ರಂದು ನಡೆದಿದೆ.
ಚಿಕ್ಕಮುಡ್ನೂರು ಬಿಜೆಪಿ ಹಿರಿಯ ಕಾರ್ಯಕರ್ತ, ಬನ್ನೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು, ಕೊಲ್ಯ ನಿವಾಸಿ ಜಿನ್ನಪ್ಪ ಗೌಡ(53) ಮೃತರು.

ಜಿನ್ನಪ್ಪ ಗೌಡ ರವರು ಡಿ.ವಿ. ಸದಾನಂದ ಗೌಡ ರವರ ಅವಧಿಯಲ್ಲಿ ಬಿಜೆಪಿ ಪಕ್ಷಕ್ಕಾಗಿ ಹಗಲಿರುಳೆನ್ನದೆ ದುಡಿದಿದ್ದರು.
ಮೃತರು ಪತ್ನಿ, ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

























