ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬಿಟ್ಟು ಹೊರಕ್ಕೆ ಬಂದು ಹಾನಿಗೊಂಡ ಘಟನೆ ಅ.16 ರಂದು ಬೆಳಿಗ್ಗೆ ಕೇಪುಳು ಸರ್ಕಲ್ ಬಳಿ ನಡೆದಿದೆ.

ಹೊಸ ಬಲೆನೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೇಪುಳು ಸರ್ಕಲ್ ಬಳಿ ರಸ್ತೆ ಬಿಟ್ಟು ಹೊರಕ್ಕೆ ಬಂದಿದ್ದು, ಘಟನೆಯಿಂದಾಗಿ ಕಾರಿನ ಮುಂಭಾಗ ಹಾನಿಗೊಳಗಾಗಿದೆ.

ಸ್ಥಳಕ್ಕೆ ಪುತ್ತೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಘಟನೆಯಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ..

























