ಪುತ್ತೂರು: ಕೊಡಿನೀರು ಹಾಲು ಉತ್ಪಾದಕರ ಸಂಘಕ್ಕೆ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಸುಮಾರು 10 ಕುರ್ಚಿಗಳನ್ನು ಕೊಡುಗೆಯಾಗಿ ಹಸ್ತಾಂತರ ಮಾಡಲಾಯಿತು.

ಶ್ರೀರಾಮ ಗೆಳೆಯರ ಬಳಗದ ನೂತನ ಅಧ್ಯಕ್ಷ ಪುರುಷೋತ್ತಮ ಬಿಕೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಪುಷ್ಪ ಮತ್ತು ಉಪಾಧ್ಯಕ್ಷ ವಿಶ್ವನಾಥ ಗೌಡ ರವರಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಹರೀಶ್ ಬಿಕೆ, ನೂತನ ಕಾರ್ಯದರ್ಶಿ ಯೋಗೀಶ್ ಕಲ್ಲಮ, ಸಂಚಾಲಕ ಪುರಂದರ ಗೌಡ ನಡುಬೈಲು, ಪಂಚಾಯತ್ ಸದಸ್ಯ ಅಶೋಕ್ ಪುತ್ತಿಲ, ಗೌರವ ಸಲಹೆಗಾರರಾದ ಸುಂದರ ನಾಯ್ಕ್, ಬಾಲಚಂದ್ರ ಗೌಡ, ಅರುಣ್ ಪುತ್ತಿಲ,ಅನಿಲ್ ಕಣ್ಣರ್ನೂಜಿ, ಧನಂಜಯ ನಾಯ್ಕ್, ಜಗದೀಶ ಮತ್ತು ಹಾಲು ಉತ್ಪಾದಕರ ಸಂಘದ ಸದಸ್ಯರು, ಸಿಬ್ಬಂದಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

























