ಕಾಸರಗೋಡು: ಮೀಸಲು ಅರಣ್ಯದಿಂದ ಮರ ಕಳ್ಳ ಸಾಗಾಣಿಕೆ ಮಾಡುವಾಗ ಮರ ಕಳ್ಳರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಕಾಸರಗೋಡು ತಾಲೂಕಿನ ದೇಲಂಪಾಡಿ ನೂಜಿಬೆಟ್ಟುವಿನಲ್ಲಿ ನಡೆದಿದೆ.

ನೂಜಿಬೆಟ್ಟು ಪರಪ್ಪ ಮೀಸಲು ಅರಣ್ಯದಿಂದ ಕಡಬ ಮೂಲದ ಮೂವರು ಸಾಗುವಾನಿ ಮರವನ್ನು ಕದ್ದು ಪರಾರಿಯಾಗುತ್ತಿದ್ದ ವೇಳೆ ಸಾರ್ವಜನಿಕರು ಹಿಡಿದು ಕಾಸರಗೋಡು ಅರಣ್ಯ ಇಲಾಖಾ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ..

























