ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ಸಿಐಟಿಯು ಇದರ ಮಹಾಸಭೆಯು ವಿಟ್ಲ ಕಾಶೀಮಠ ಶ್ರೀಕಾಶೀ ಯುವಕ ಮಂಡಲದ ಸೌಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಘದ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ರಮೇಶ ಶಿವಾಜಿನಗರ, ಗೌರವಾಧ್ಯಕ್ಷರಾಗಿ ರಾಮಣ್ಣ ವಿಟ್ಲ, ಕಾರ್ಯದರ್ಶಿಯಾಗಿ ಶಿವಪ್ಪ ನಾಯ್ಕ, ಕೋಶಾಧಿಕಾರಿಯಾಗಿ ಕೆ ಪಿ ಇಸ್ಮಾಯಿಲ್ ರನ್ನು ಆಯ್ಕೆ ಮಾಡಲಾಯಿತು.

ಈ ವೇಳೆ ಕಾನೂನು ಸಲಹೆಗಾರ ನ್ಯಾಯಾವಾದಿ ಪದ್ಮನಾಭ ಪೂಜಾರಿ ಅಳಿಕೆ ರನ್ನು ಸನ್ಮಾನಿಸಲಾಯಿತು. ತಾರಾನಾಥ, ವಿಠ್ಠಲ ಶೆಟ್ಟಿ, ಬಾಲಕೃಷ್ಣ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.


























