ತೆಲಂಗಾಣದ ಪರೀಕ್ಷಾ ಕೇಂದ್ರದಲ್ಲಿ ಹಿಂದೂ ಅಭ್ಯರ್ಥಿಗಳ ಮಾಂಗಲ್ಯಸರ ತೆಗೆಸಿ ಒಳಗೆ ಕಳುಹಿಸಿದ್ದಾರೆ. ಆದ್ರೆ ಮುಸ್ಲಿಂ ಅಭ್ಯರ್ಥಿಗಳಿಗೆ ಮಾತ್ರ ಬುರ್ಖಾ ಧರಿಸಿ ಹೋಗಲು ಅನುಮತಿ ನೀಡಿದ್ದಾರೆ. ಹಿಜಾಬ್ ವಿವಾದದ ನಡುವೆ ತೆಲಂಗಾಣದಲ್ಲಿ ನಡೆದಿರುವ ಘಟನೆ ಹೊಸ ವಿವಾದ ಹುಟ್ಟು ಹಾಕಿದೆ.
ಪರೀಕ್ಷಾ ಕೇಂದ್ರವೊಂದರಲ್ಲಿ ಮಹಿಳಾ ಅಭ್ಯರ್ಥಿಗಳ ಮೈಮೇಲಿದ್ದ ಕಿವಿಯೋಲೆ, ಕಾಲುಂಗುರ, ಕಾಲೆಜ್ಜೆ, ಕೈಬಳೆ, ಹಾಗೂ ಮಾಂಗಲ್ಯ ಸರವನ್ನು ಬಿಚ್ಚಿಸಿಕೊಳ್ಳಿರುವುದು. ಮತ್ತೊಂದೆಡೆ ಮುಸ್ಲಿಂ ಅಭ್ಯರ್ಥಿಗಳು ಬುರ್ಖಾ ಸಮೇತ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಬಿಡುತ್ತಿರುವುದು. ತಾರತಮ್ಯ ಮಾಡುತ್ತಿರುವ ಈ ದೃಶ್ಯ ಕಂಡು ಬಂದಿದ್ದು, ತೆಲಂಗಾಣದ ಪರೀಕ್ಷಾ ಕೇಂದ್ರದಲ್ಲಿ.
ತೆಲಂಗಾಣದ ಟಿ.ಎಸ್.ಪಿ.ಎಸ್.ಸಿ ಪರೀಕ್ಷೆಯಲ್ಲಿ ಸಿಬ್ಬಂದಿ ಹಿಂದೂ- ಮುಸ್ಲಿಂ ಎಂದು ತಾರತಮ್ಯ ಮಾಡಿರುವುದು ಬೆಳಕಿಗೆ ಬಂದಿದೆ. ಹಿಂದೂ ಮಹಿಳೆಯರ ಮಂಗಳಸೂತ್ರ, ಕಾಲೆಜ್ಜೆ, ಕಿವಿಯೋಲೆ, ಕೈ ಬಳೆ ತೆಗೆಸಿದ ಸಿಬ್ಬಂದಿ, ಮುಸ್ಲಿಂರಿಗೆ ಮಾತ್ರ ಬುರ್ಖಾದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿದ್ದಾರೆ. ಕಳೆದ ಅಕ್ಟೋಬರ್ 16ರಂದು ಅದಿಲಾಬಾದ್ನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ನಿಯಮಗಳೇನು..!!??
- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಸಾಮಾನ್ಯವಾಗಿ ಪರೀಕ್ಷೆ ಶುರುವಾಗುವ 30 ನಿಮಿಷ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಬರಬೇಕು.
- ಪರೀಕ್ಷಾ ಕೊಠಡಿಗಳಿಗೆ ಮೊಬೈಲ್ ಫೋನ್, ಪೇಜರ್ ತರುವಂತಿಲ್ಲ, ಬ್ಲೂಟೂತ್, ಬುಕ್ಸ್, ಪೇಪರ್ ಕೂಡ ತರುವಂತಿಲ್ಲ.
- ಎಲೆಕ್ಟ್ರಾನಿಕ್ ಸಂಬಂಧಿತ ವಸ್ತುಗಳು ಕೂಡ ತರುವಂತಿಲ್ಲ.
- ನೀಟ್ನಂತಹ ಕೆಲವು ಪರೀಕ್ಷೆಗಳಲ್ಲಿ ವಾಚ್ಗಳನ್ನು ಕಟ್ಟುವುದೂ ಸಹ ನಿಷೇಧಿಸಲಾಗಿದೆ.
ಇನ್ನು ತೆಲಂಗಾಣ ಪರೀಕ್ಷಾ ಕೇಂದ್ರದ ಈ ವಿವಾದವೂ ರಾಜಕೀಯ ಸ್ವರೂಪ ಪಡೆದಿದೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಟಿಆರ್ಎಸ್ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ ಅಂತ ತೆಲಂಗಾಣ ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಟ್ವಿಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಗೈಡ್ಲೈನ್ ಪ್ರಕಾರವೇ ಪರೀಕ್ಷಾ ಕೇಂದ್ರದಲ್ಲಿ ತಪಾಸಣೆ ನಡೆಸಲಾಗಿದೆ. ಬಿಜೆಪಿ ಶಾಂತಿ ಕದಡಲು ಪ್ರಯತ್ನಿಸ್ತಿದೆ ಅಂತ ಟಿಆರ್ಎಸ್ ನಾಯಕ ಕೃಷನ್ ಟ್ವಿಟರ್ನಲ್ಲಿ ತಿರುಗೇಟು ನೀಡಿದ್ದಾರೆ. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರ ತಪ್ಪಿನಿಂದ ಇದೆಲ್ಲಾ ಆಗಿದೆ. ಆ ಬಳಿಕ ಇದನ್ನು ಸರಿಪಡಿಸಿಕೊಳ್ಳಲಾಗಿದೆ ಅಂತ ಆದಿಲಾಬಾದ್ ಎಸ್ಪಿ ಡಿ. ಉದಯ್ ಕುಮಾರ್ ಹೇಳಿದ್ದಾರೆ. ಆದ್ರೆ ಹಿಂದೂ ಸಂಪ್ರದಾಯದಲ್ಲಿ ಮಂಗಳಸೂತ್ರಕ್ಕೆ ವಿಶೇಷ ಸ್ಥಾನ ಇದೆ. ಪರೀಕ್ಷಾ ನಿಯಮ ಪಾಲಿಸುವ ನೆಪದಲ್ಲಿ ಮಂಗಳಸೂತ್ರ ತೆಗೆಸಿರೋದು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸಿದೆ.


























