ವಿಟ್ಲ: ಸುಪ್ರಜಿತ್ ಫೌಂಡೇಶನ್ ಬೆಂಗಳೂರು ಇದರ ಸ್ಥಾಪಕಧ್ಯಕ್ಷರಾದ ಅಜಿತ್ ಕುಮಾರ್ ರೈ ಇವರು ವಿಠ್ಠಲ ಸುಪ್ರಜಿತ್ ಐಟಿಐನ 90 ವಿದ್ಯಾರ್ಥಿಗಳಿಗೆ ಕೊಡಮಾಡಿದ 4,50,000 ರೂ. ನ ವಿದ್ಯಾರ್ಥಿ ವೇತನವನ್ನು ವಿತರಿಸುವ ಕಾರ್ಯಕ್ರಮವು ವಿಠ್ಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ವಿಠ್ಠಲ ವಿದ್ಯಾ ಸಂಘದ ಸಂಚಾಲಕರಾದ ಎಲ್.ಎನ್. ಕೂಡೂರು ರವರು ಅಧ್ಯಕ್ಷತೆಯನ್ನು ವಹಿಸಿದ್ದರು.
ವಿಠ್ಠಲ ಸುಪ್ರಜಿತ್ ಐಟಿಐನ ಸಂಚಾಲಕರಾದ ಅಲ್ಫಾನ್ಸೋ ಸಿಲ್ವೆಸ್ಟರ್ ಮಸ್ಕರೇನ್ಹಸ್, ಸುಪ್ರಜಿತ್ ವಿದ್ಯಾರ್ಥಿ ವೇತನ ಕಮಿಟಿಯ ಚೇರ್ಮೆನ್ ಅನಂತಕೃಷ್ಣ ಹೆಬ್ಬಾರ್, ವಿಠ್ಠಲ ಸುಪ್ರಜಿತ್ ಐಟಿಐನ ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ, ವಿಠ್ಠಲ ವಿದ್ಯಾಸಂಘದ ಸದಸ್ಯರುಗಳಾದ ನಿತ್ಯಾನಂದ ನಾಯಕ್, ಭವಾನಿ ರೈ ಕೊಲ್ಯ, ಸದಾಶಿವ ಬನ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಆದರ್ಶ ಎ ಎಸ್ ಉಪಸ್ಥಿತರಿದ್ದರು.
ಸುಬ್ರಾಯ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಲ್ಪಾನ್ಸ್ ವೇಗಸ್ ಕಾರ್ಯಕ್ರಮ ನಿರೂಪಿಸಿ, ಪ್ರಾಂಶುಪಾಲರಾದ ರಮೇಶ್ ರೈ ಸ್ವಾಗತಿಸಿದರು, ಕಿರಿಯ ತರಬೇತಿ ಅಧಿಕಾರಿಗಳಾದ ಅಶೋಕ ಆಚಾರ್ಯ, ಬಾಲಸುಬ್ರಹ್ಮಣ್ಯ, ಮರಿನಾ ಪಿಂಟೋ ಸಹಕರಿಸಿದರು.


























