ರಾಜ್ಯ ಸರ್ಕಾರವು ದೈವನರ್ತಕರಿಗೆ ಸಿಹಿ ಸುದ್ದಿ ನೀಡಿದ್ದು, ಮಾಸಾಶನ ನೀಡಲು ತೀರ್ಮಾನಿಸಿದೆ.
ದೈವ ನರ್ತನ ಮಾಡುವವರಿಗೆ ಮಾಸಾಶನ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದೈವ ನರ್ತನ ಮಾಡುವವರಿಗೆ ಮಾಸಾಶನ ನೀಡಲಾಗುವುದು. 60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು 2000 ರೂಪಾಯಿ ಮಾಸಾಶನ ನೀಡಲಾಗುವುದು ಎಂದು ತಿಳಿಸಿದರು.

ದೈವ ನರ್ತಕರ ಬೆಂಬಲಕ್ಕೆ ನಿಂತ ಬಿಜೆಪಿ ಸರ್ಕಾರ @karkalasunil ಅವರಿಗೆ ಧನ್ಯವಾದಗಳು pic.twitter.com/SHY8CF8jaB
— BJP Dakshina Kannada (@BjpMangaluru) October 20, 2022


























