ಪುತ್ತೂರು: ಇಂಡಿಯನ್ ಒಲಂಪಿಕ್ ಅಸೋಸಿಯೇಷನ್ ವತಿಯಿಂದ ಸೆ.29 ರಿಂದ ಅ.15ರ ವರೆಗೆ ಗುಜರಾತ್ ನಲ್ಲಿ ನಡೆದ ನ್ಯಾಷನಲ್ ಯೋಗ ಗೇಮ್ಸ್ ರಿದಮಿಕ್ ಯೋಗ ಸ್ಪರ್ಧೆಯಲ್ಲಿ ಅಕ್ಷಯ ಕಾಲೇಜಿನ ತೃತೀಯ ವರ್ಷ ಬಿ.ಎಸ್ಸಿ ವಿದ್ಯಾರ್ಥಿನಿ ಪ್ರಣಮ್ಯ ಅಗಳಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಯೋಗದಲ್ಲಿ ಹಲವಾರು ಸಾಧನೆಗೈದ ಯೋಗ ಸಾಧಕಿ ಪ್ರಣಮ್ಯ ಅಗಳಿ ರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್, ಅಂತರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್, ಯೋಗ ಒಲಂಪಿಯಾಡ್ ಚಾಂಪಿಯನ್ ಶಿಪ್, ಎನ್.ವೈ.ಎಸ್.ಎಫ್ ಯೋಗ ಸ್ಪೋರ್ಟ್ಸ್ ಫೆಡರೇಷನ್, ಇಂಟರ್ ನ್ಯಾಷನಲ್ ಫೈವ್ ಸ್ಟಾರ್ ಅವಾರ್ಡ್, GIZA ವರ್ಲ್ಡ್ ವೈಡ್ ರೆಕಾರ್ಡ್, ಕ್ರೀಡಾ ಭಾರತಿ ಜೀಜಾಬಾಯಿ ಪ್ರಶಸ್ತಿ, ಇಂಟರ್ ನ್ಯಾಷನಲ್ ಎಕ್ಸ್ ಲೆನ್ಸ್ ಪ್ಲೇಯರ್ ಅವಾರ್ಡ್, ಯೂನಿವರ್ಸಲ್ ಬುಕ್ ಆಫ್ ರೆಕಾರ್ಡ್ಸ್ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದು, ಮೈಸೂರು ರಾಜ್ಯ ಯೋಗ ದಸರಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿನಿಗೆ ಅಕ್ಷಯ ಕಾಲೇಜಿನ ಅಧ್ಯಕ್ಷರು, ಆಡಳಿತ ಮಂಡಳಿ, ಪ್ರಾಂಶುಪಾಲರು, ಆಡಳಿತ ಅಧಿಕಾರಿ, ಬೋಧಕ-ಬೋಧಕೇತಕ ಸಿಬ್ಬಂದಿ ವರ್ಗ ಅಭಿನಂದನೆಯನ್ನು ಸಲ್ಲಿಸಿದ್ದಾರೆ.


























