ಪುತ್ತೂರು: ಸಾರಿಗೆ ಇಲಾಖೆ ಏಕಾಏಕಿ ಸಾರಿಗೆ / ಗೂಡ್ಸ್ ವಾಹನ ಮಾಲೀಕರಿಗೆ ಅರ್ಹತಾ ಪತ್ರ ಪಡೆಯಲು ಕಡ್ಡಾಯಗೊಳಿಸಿರುವ ದುಬಾರಿ ವೆಚ್ಚದ ರೆಟ್ರೋ ರಿಪ್ಲೆಕ್ಟೆರ್ ಮಾಡಿರುವುದನ್ನು ರದ್ದುಗೊಳಿಸುವಂತೆ ಪುತ್ತೂರು ಸಾರಿಗೆ ಇಲಾಖಾ ಅಧಿಕಾರಿಗಳಿಗೆ ಪುತ್ತೂರು ಬ್ಲಾಕ್ ಯುವಕಾಂಗ್ರೆಸ್ ವತಿಯಿಂದ ಮನವಿ ಸಲ್ಲಿಸಲಾಯಿತು.

ಸಾರಿಗೆ ಇಲಾಖೆಯಲ್ಲಿ ವಾಹನ ನೋಂದಣಿ ನವೀಕರಣ ಸೇರಿದಂತೆ ಪ್ರತಿಯೊಂದರ ದರ ಹೆಚ್ಚಿದ್ದು ಇದರಿಂದ ವಾಹನ ಮಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಬೆಲೆ ಏರಿಕೆ ಹಾಗೂ ಸರಿಯಾದ ಬಾಡಿಗೆ ಸಿಗದೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಪ್ರಸ್ತುತ ದಿನಗಳಲ್ಲಿ ದುಬಾರಿ ಹಣ ಪಡೆದು ರೆಟ್ರೋ ರಿಪ್ಲೆಕ್ಟೆರ್ ಮತ್ತು ಸ್ಪೀಕರ್ ಕಡ್ಡಾಯಗೊಳಿಸಿರುವುದು ಹೊರೆಯಾಗಿದೆ. ಆದುದರಿಂದ ಇದನ್ನು ರದ್ದುಗೊಳಿಸುವಂತೆ ಮನವಿಯಲ್ಲಿ ತಿಳಿಸಿದ್ದು, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಯುವಕಾಂಗ್ರೆಸ್ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಪುತ್ತೂರು ಬ್ಲಾಕ್ ಯುವಕಾಂಗ್ರೆಸ್ ಉಪಾಧ್ಯಕ್ಷ ಹನೀಫ್ ಪುಣ್ಚತ್ತಾರ್, ಪುತ್ತೂರು ಬ್ಲಾಕ್ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಮಲೇಶ್ ಸರ್ವೆದೋಳಗುತ್ತು, ಎನ್ ಎಸ್ ಯು ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆ, ಮಾಜಿನಗರ ಸಭೆ ಸದಸ್ಯ ಅನ್ವರ್ ಕಾಸಿಂ, ಪುತ್ತೂರು ಬ್ಲಾಕ್ ಮಾಜಿ ಕಾರ್ಯದರ್ಶಿ ಗಂಗಾಧರ್ ಶೆಟ್ಟಿ, ಸಾನವಾಜ್ ಬಪ್ಪಳಿಗೆ, ಶಂಸುಂದ್ದಿನ್ ಅಜ್ಜಿನಡ್ಕ, ಕಬಕ ವಲಯಾಧ್ಯಕ್ಷ ದಾಮೋದರ ಮುರ, ಇಸ್ಮಾಯಿಲ್ ಬಲ್ನಾಡ್ ಉಪಸ್ಥಿತರಿದ್ದರು.


























