ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ಮತ್ತು ಶ್ರೀರಾಮ ಪದವಿ ಪೂರ್ವ ಕಾಲೇಜು ಕಲ್ಲಡ್ಕ ಇವರ ಆಶ್ರಯದಲ್ಲಿ ರಾಜ್ಯ ಮಟ್ಟದ ಮತ್ತು ಕ್ಷೇತ್ರಿಯ ಮಟ್ಟದ ಶಟಲ್ ಬಾಡ್ಮಿಂಟನ್ ಪಂದ್ಯಾಟವು ಅ.19 ರಂದು ಆಫೀಸರ್ ಕ್ಲಬ್ ಪುತ್ತೂರಿನಲ್ಲಿ ನಡೆಯಿತು.

ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಬಾಲವರ್ಗದ ಬಾಲಕರ ವಿಭಾಗದಲ್ಲಿ 6ನೇ ತರಗತಿಯ ಇಶಾನ್.ಕೆ ( ನಾರಾಯಣ ಮೂರ್ತಿ ಮತ್ತು ಪ್ರೇಮಲತ ಇವರ ಪುತ್ರ), ಹಿತನ್ ಕುಮಾರ್ (ಉದಯ ಮತ್ತು ಲಲಿತ ಇವರ ಪುತ್ರ), 7ನೇ ತರಗತಿಯ ಕಾರ್ತಿಕ್ ಕುಮಾರ್ (ಪ್ರಶಾಂತ್ ಕುಮಾರ್ ಮತ್ತು ಅಂಜಲಿ ಇವರ ಪುತ್ರ) ಮತ್ತು ಮಹಿನ್.ಪಿ.ಆರ್ ( ರಾಕೇಶ್ ಕುಮಾರ್ ಪರ್ಲಡ್ಕ ಜ್ಯೋತಿ ಇವರ ಪುತ್ರ) ಇವರು ಭಾಗವಹಿಸಿ, ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಬಾಲ ವರ್ಗದ ಬಾಲಕಿಯರ ವಿಭಾಗದಲ್ಲಿ 8ನೇ ತರಗತಿಯ ಸಮನ್ವಿತ.ಕೆ ( ಕಿಶೋರ್ ಕುಮಾರ್ ಮತ್ತು ರೂಪಾಶ್ರೀ.ಕೆ ಇವರ ಪುತ್ರಿ), 7ನೇ ತರಗತಿಯ ಕೀರ್ತನಾ ( ಪ್ರತಾಪ್ ಸಿಂಹ ವರ್ಮ ಮತ್ತು ವೀಣಾ ಕುಮಾರಿ ಇವರ ಪುತ್ರಿ) ಇವರು ಭಾಗವಹಿಸಿ, ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಕಿಶೋರ ವರ್ಗ ಬಾಲಕಿಯರ ವಿಭಾಗದಲ್ಲಿ 10ನೇ ತರಗತಿಯ ಹರ್ಷಿತ (ಸಂತೋಷ್ ನಾಯ್ಕ ಮತ್ತು ಕವಿತಾ.ಕೆ ಇವರ ಪುತ್ರಿ) , ಶ್ರೇಯಾ.ರಾವ್ (ಕೆ. ಅನಂತಕೃಷ್ಣ ರಾವ್ ಮತ್ತು ವೀಣಾ ರಾವ್ ಇವರ ಪುತ್ರಿ), 9ನೇ ತರಗತಿಯ ಸಾನ್ವಿ ( ಜೆ.ನೆಲ್ಸನ್ ಮತ್ತು ವಾಣಿ.ಯು.ಹೆಚ್ ಪುತ್ರಿ), ರುಚಿತಾ.ಆರ್ (ರತ್ನಾಕರ್ ಪ್ರಭು ಮತ್ತು ಸವಿತಾ.ಕೆ ಇವರಪುತ್ರಿ) ಇವರು ಭಾಗವಹಿಸಿ, ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























