ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡುತ್ತಿರುವ ಅರುಣಾ ಚಿತ್ರಮಂದಿರದ ಎದುರಿನ ಪ್ರಭು ಬಿಲ್ಡಿಂಗ್ನಲ್ಲಿ ಕಾರ್ಯಾಚರಿಸುತ್ತಿರುವ ‘ಪ್ರೇರಣಾ’ ಸಂಸ್ಥೆಯಿಂದ ಅ.23 ರಂದು ಭಾಷಣ ತರಬೇತಿ ಶಿಬಿರ ನಡೆಯಲಿದೆ.

ಯಶಸ್ವಿ ಸಭಾ ಕಾರ್ಯಕ್ರಮ ನಿರ್ವಹಣೆ, ಉತ್ತಮ ವಾಗ್ಮಿಯಾಗುವ ಆಕಾಂಕ್ಷಿಗಳಿಗೆ ತಕ್ಕಂತೆ ‘ಸಮರ್ಪಣಾ’ ಎನ್ನುವ ಭಾಷಣ ತರಬೇತಿ ನಡೆಯಲಿದ್ದು, ಆಸಕ್ತರು ನೋಂದಾವಣೆ ಮಾಡುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.


























