ವಿಟ್ಲ: ಯಕ್ಷ ಭಾರತ ಸೇವಾ ಪ್ರತಿಷ್ಠಾನ ವಿಟ್ಲ ಇದರ 7ನೇ ವರ್ಷದ ‘ವಿಟ್ಲ ಯಕ್ಷೋತ್ಸವ’ ಕಾರ್ಯಕ್ರಮ ಶ್ರೀಭಗವತೀ ದೇವಸ್ಥಾನದ ಸಭಾ ಭವನದಲ್ಲಿ ಅ.30ರಂದು ನಡೆಯಲಿದ್ದು, ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀಭಗವತೀ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ವೇಳೆ ದೇವಸ್ಥಾನದ ಆಡಳಿತ ಮೊಕ್ತೇಸರ ಕೇಶವ ವಿಟ್ಲ, ಪ್ರತಿಷ್ಠಾನದ ಅಧ್ಯಕ್ಷ ಸಂಜೀವ ಪೂಜಾರಿ, ಪ್ರಶಾಂತ ಶೆಟ್ಟಿ, ಚಂದ್ರ, ಉಮೇಶ್ ಆಚಾರ್ಯ, ದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಕ್ಕಳ ಯಕ್ಷಗಾನ ಜಾಬವತಿ ಕಲ್ಯಾಣ, ತೆಂಕು ತಿಟ್ಟಿನ ನುರಿತ ಕಲಾವಿದರಿಂದ ಚಂದ್ರಾವಳಿ ವಿಳಾಸ ಮತ್ತು ಇಂದ್ರಜಿತು ಕಾಳಗ ಯಕ್ಷಗಾನ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ.


























