ಮೂಡಬಿದಿರೆ: ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಸುದರ್ಶನ್ ಮೂಡಬಿದಿರೆ ರವರ ತಂದೆ ಗುರುಸ್ವಾಮಿ ರಮೇಶ್ ಶಾಂತಿ ರವರು ಅಸೌಖ್ಯದಿಂದಾಗಿ ಅ.22 ರಂದು ನಿಧನರಾದರು.

ಧಾರ್ಮಿಕ ಮುಂದಾಳು ಆಗಿದ್ದ ರಮೇಶ್ ಶಾಂತಿ ರವರು ಹಲವು ವರ್ಷಗಳಿಂದ ಅಯ್ಯಪ್ಪ ಮಾಲೆಯನ್ನು ಧರಿಸುತ್ತಿದ್ದು, ಗುರುಸ್ವಾಮಿಗಳಾಗಿದ್ದರು ಹಾಗೇ ನೂರಾರು ಅಯ್ಯಪ್ಪ ಭಕ್ತರಿಗೆ ಗುರುಗಳಾಗಿದ್ದರು.
ಮೃತರು ಮನೆಯವರು, ಕುಟುಂಬಸ್ಥರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ..


























