ವಿಟ್ಲ: ವಿನೂತನ ಯುವಕ ಮಂಡಲ (ರಿ)ಬೊಳಂತಿಮೊಗರು ವತಿಯಿಂದ ವಿನೂತನ ಯುವಕ ಮಂಡಲದ ಸಕ್ರಿಯ ಸದಸ್ಯ ಅಶೋಕ್ ಅಂಚನ್ ತೆಂಗಿನ ಮರದಿಂದ ಬಿದ್ದು, ಬೆನ್ನು ಮೂಳೆ ಮುರಿತಕ್ಕೊಳಗಾಗಿದ್ದು, ಯಾವುದೇ ಕೆಲಸ ಮಾಡಲಾಗದೆ ಇರುವ ಕಾರಣ ಯುವಕ ಮಂಡಲದ ವತಿಯಿಂದ 10000 ರೂ. ಚಿಕಿತ್ಸಾ ವೆಚ್ಚವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಯುವಕ ಮಂಡಲದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.


























