ವಿಶ್ವದಾದ್ಯಂತ ಹಲವು ನಗರಗಳಲ್ಲಿ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಬಳಕೆದಾರರಿಗೆ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಇದೀಗ ಕಾರ್ಯ ನಿರ್ವಹಿಸುತ್ತಿದೆ.
ಅಕ್ಟೋಬರ್ 25 ಇಂದು ಮಧ್ಯಾಹ್ನ 12:30 ನಂತರ ವಾಟ್ಸ್ಆ್ಯಪ್ ಕಾರ್ಯ ನಿರ್ವಹಿಸುತ್ತಿಲ್ಲ. ಆಂಡ್ರ್ಯಾಯ್ಡ್ , ಐಒಎಸ್ ಹಾಗೂ ವೆಬ್ ಅಪ್ಲಿಕೇಷನ್ಸ್‌ಗಳಲ್ಲೂ ಕೆಲಸ ಮಾಡುತ್ತಿಲ್ಲ. ವಾಟ್ಸ್ಆ್ಯಪ್ನಲ್ಲಿ ಯಾರಿಗೂ ಮೆಸೇಜ್ ಸೆಂಡ್ ಮಾಡಲು ಆಗುತ್ತಿಲ್ಲ. ಅಂತೆಯೆ ಯಾವುದೇ ಮೆಸೇಜ್ ರಿಸಿವ್ ಆಗುತ್ತಿರಲಿಲ್ಲ. ಈ ಬಗ್ಗೆ ಅನೇಕರು ಟ್ವಿಟರ್ನಲ್ಲಿ ದೂರು ನೀಡುತ್ತಿದ್ದರು.
2000 ಕ್ಕೂ ಅಧಿಕ ಬಳಕೆದಾರರು ವಾಟ್ಸ್ಆ್ಯಪ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರು ನೀಡಿದ್ದಾರೆ. ಶೇ. 69 ರಷ್ಟು ಬಳಕೆದಾರರು ವಾಟ್ಸ್ಆ್ಯಪ್ ಮೆಸೇಜ್ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರಮುಖ ಟ್ರ್ಯಾಕರ್ ಡೌನ್ಡಿಟೆಕ್ಟರ್ ಹೇಳಿದೆ. ಫೇಸ್ಬುಕ್, ಇನ್ಸ್ಟಾಗ್ರಾಮ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ವಾಟ್ಸ್ಆ್ಯಪ್ನಲ್ಲಿ ಮಾತ್ರ ಈ ಸಮಸ್ಯೆ ಕಂಡುಬಂದಿದ್ದು, ಇದೀಗ ಕಾರ್ಯ ನಿರ್ವಹಿಸುತ್ತಿದೆ..




























