ಬಂಟ್ವಾಳ: ಮಾಣಿಯ ಗಾಂಧಿ ಮೈದಾನದಲ್ಲಿ ಮಾಣಿ ಯುವಕ ಮಂಡಲದ ವತಿಯಿಂದ ಸೌಹಾರ್ದತೆಯ ದೀಪಾವಳಿ ಹಬ್ಬದ ಆಚರಣೆ ಕಬಡ್ಡಿ ಮತ್ತು ಕ್ರಿಕೆಟ್ ಅಂಕಣದಲ್ಲಿ ಹಣತೆ ಹಚ್ಚುವ ಮೂಲಕ ನಡೆಯಿತು.

ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಮಾಣಿ ಯುವಕ ಮಂಡಲದ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪಂಚಾಯತ್ ಸದಸ್ಯ ಇಬ್ರಾಹಿಂ.ಕೆ.ಮಾಣಿ, ಹಿರಿಯ ಕಬಡ್ಡಿ ಆಟಗಾರ ಅಬ್ದುಲ್ ಮಜೀದ್, ಯುವಕ ಮಂಡಲದ ಸದಸ್ಯರಾದ ರಕ್ಷಣ್, ಧನುಷ್ ಶೆಟ್ಟಿ, ದೀಕ್ಷಿತ್ ಮೊದಲಾದವರು ಉಪಸ್ಥಿತರಿದ್ದರು.




























