2022ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಕಲಾವಿದೆ ಗುರುಪ್ರಿಯಾ ನಾಯಕ್ ನರಿಮೊಗರು ಆಯ್ಕೆಯಾಗಿದ್ದಾರೆ .ಪ್ರಭಾರ ಜಿಲ್ಲಾಧಿಕಾರಿಗಳೂ ಆಗಿರುವ ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|ಕುಮಾರ್ ಅವರು ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

ಗುರುಪ್ರಿಯ ನಾಯಕ್‌ರವರು ನರಿಮೊಗರು ಗ್ರಾಮದ ಪುರುಷರಕಟ್ಟೆ ನಿವಾಸಿಯಾಗಿದ್ದು, 2007ರಲ್ಲಿ ನರಿಮೊಗರುವಿನಲ್ಲಿ ಪ್ರಖ್ಯಾತಿ ಯುವತಿ ಮಂಡಲವನ್ನು ಸ್ಥಾಪನೆ ಮಾಡಿ ಕಳೆದ 15 ವರ್ಷದಿಂದಲೂ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಪ್ರಖ್ಯಾತಿ ಯುವತಿ ಮಂಡಲವು ಯುವಜನ ಮೇಳದ ಎಲ್ಲಾ ಸ್ಪರ್ಧೆಗಳಲ್ಲಿ ನಾಯಕ್ ಭಾಗವಹಿಸಿ ಹಲವು ವರ್ಷ ತಾಲೂಕಿನ ಸಮಗ್ರ ಪ್ರಶಸ್ತಿ ಗಳಿಸಿದೆ, ಗುರುಪ್ರಿಯಾ ರವರು ಏಕಪಾತ್ರಾಭಿನಯ, ಭಾವಗೀತೆ, ಲಾವಣಿಯಲ್ಲಿ ರಾಜ್ಯಮಟ್ಟದ ಯುವಜನ ಮೇಳದಲ್ಲಿ 6 ಬಾರಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಅಲ್ಲದೇ ಗುಂಪು ಸ್ಪರ್ಧೆಗಳಾದ ಗೀಗೀಪದ, ರಾಗಿ ಬೀಸುವ ಪದ, ಜನಪದ ಗೀತೆಯಲ್ಲೂ ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ್ದಾರೆ. ಪ್ರಸ್ತುತ ಪತಿ ಶಿವಾನಂದ ಕಾಮತ್‌ರವರೊಂದಿಗೆ ಮೆಲ್ಕಾರ್‌ನಲ್ಲಿ ನೆಲೆಸಿದ್ದು,ಪುರುಷರಕಟ್ಟೆ ಹಾಗೂ ಮೆಲ್ಕಾರ್‌ನಲ್ಲಿ ಗುರುಕುಲ ಕಲಾ ಕೇಂದ್ರದ ಮೂಲಕ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ತರಬೇತಿ
ಗುರುಪ್ರಿಯಾ ಅವರಿಗೆ ಜಿಲ್ಲಾ ಯುವ ಪ್ರಶಸ್ತಿ, ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ದೊರಕಿವೆ.

























