ಬಂಟ್ವಾಳ: ಪೆರುವಾಯಿ ಗ್ರಾಮದ ದೇಮೆಚ್ಚಿ ನಿವಾಸಿ ಶೀಲಾವತಿ ಶೆಟ್ಟಿಯವರ ಮನೆಯ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಬಂಟರ ಸಂಘ ಕೈಜೋಡಿಸಿದ್ದು, ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಆರ್ಥಿಕ ನೆರವಿನಿಂದ ವಿಟ್ಲ ವಲಯ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಹಾಗೂ ಕಾರ್ಯದರ್ಶಿ ಶಿವಾನಂದ ಶೆಟ್ಟಿ ಕೊಲ್ಯ ಮತ್ತು ಪೆರುವಾಯಿ ಗ್ರಾಮದ ಬಂಟರ ಸಂಘದ ಅಧ್ಯಕ್ಷರು, ಸಾಮಾಜಿಕ ಮುಂದಾಳು ಜಯರಾಮ ಆಳ್ವ ಬದಿಯಾರು ಹಾಗೂ ಕಾರ್ಯದರ್ಶಿ ಮನೋಹರ ಶೆಟ್ಟಿ ಪೇರಡ್ಕ ಇವರೆಲ್ಲರ ಸಹಕಾರದೊಂದಿಗೆ ನಿರ್ಮಾಣಗೊಂಡ ಮನೆಯ ಗೃಹಪ್ರವೇಶವು ಅ.31ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಮನೆಯ ನಿರ್ಮಾಣಕ್ಕೆ ಧನ ಸಹಾಯ ದೊರಕಿಸಿ ಕೊಡುವಲ್ಲಿ ಶ್ರಮವಹಿಸಿದ ವಿಟ್ಲ ವಲಯ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಹಾಗೂ ಕಾರ್ಯದರ್ಶಿ ಶಿವಾನಂದ ಶೆಟ್ಟಿ ಕೊಲ್ಯ ಮತ್ತು ಪೆರುವಾಯಿ ಗ್ರಾಮದ ಬಂಟರ ಸಂಘದ ಅಧ್ಯಕ್ಷರಾದ ಜಯರಾಮ ಆಳ್ವ ಬದಿಯಾರು, ಕಾರ್ಯದರ್ಶಿ ಮನೋಹರ ಶೆಟ್ಟಿ ಪೇರಡ್ಕ ಉಪಸ್ಥಿತರಿದ್ದರು.




























