ಪುತ್ತೂರಿನಲ್ಲಿ ನೂತನ ಮಾಲ್ ತಲೆಯೆತ್ತಲಿದ್ದು, ಈ ಮೂಲಕ ಸಿನಿ ಪ್ರೇಕ್ಷಕರಿಗೆ ಸಂತೋಷದ ವಿಚಾರವೊಂದು ಸಿಕ್ಕಿದೆ.
ಪುತ್ತೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಮಾಲ್ ನಲ್ಲಿ ‘ಭಾರತ್ ಸಿನೆಮಾಸ್’ ಗೆ ಕೂಡ ಕಾರ್ಯ ನಿರ್ವಹಿಸಲಿದೆ. ಈಗಾಗಲೇ ಮಾಲ್ ನ ಶೇ.80 ರಷ್ಟು ಕೆಲಸ ಕಾರ್ಯಗಳು ಮುಗಿದಿದ್ದು, ಇನ್ನೇನು ಮೂರು ತಿಂಗಳಲ್ಲಿ ನೂತನ ಮಾಲ್ ಹಾಗೂ ಮಾಲ್ ನಲ್ಲಿ ‘ಭಾರತ್ ಸಿನೆಮಾಸ್’ ಸಿನಿ ಪ್ರೇಕ್ಷಕರಿಗೆ ಮತ್ತು ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಪುತ್ತೂರಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ‘ಭಾರತ್ ಸಿನೆಮಾಸ್’ ನಲ್ಲಿ ಕೆಲಸ ನಿರ್ವಹಿಸಲು ಅಭ್ಯರ್ಥಿಗಳು ಬೇಕಾಗಿದ್ದು, ಈ ಬಗ್ಗೆ ‘ಭಾರತ್ ಸಿನೆಮಾಸ್’ ಜಾಹೀರಾತನ್ನು ನೀಡಿದೆ.
ಅಸೋಸಿಯೇಟ್ ಆಪರೇಷನ್ಸ್, ಅಸೋಸಿಯೇಟ್ ಇಂಜಿನಿಯರ್ ಗಳಾಗಿ ಕಾರ್ಯನಿರ್ವಹಿಸಲು ಅಭ್ಯರ್ಥಿಗಳು ಬೇಕಾಗಿದ್ದು, ಡಿ.7 ರಂದು ಸಂದರ್ಶನ ನಡೆಯಲಿದೆ..
