ಪುತ್ತೂರು: ದರ್ಬೆ ಬೈಪಾಸ್ ಬಳಿಯ ಕಟ್ಟಡವೊಂದರ ನೆಲ ಅಂತಸ್ತಿನ ಕೊಠಡಿಯಲ್ಲಿ ಶೇಖರಿಸಿಟ್ಟಿದ್ದ ಪಟಾಕಿಗಳಿಗೆ ಬೆಂಕಿ ತಗುಲಿ ಸ್ಫೋಟಗೊಂಡ ಘಟನೆಗೆ ಸಂಬಂಧಿಸಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಟ್ಟಡದೊಳಗೆ ಅಕ್ರಮವಾಗಿ ಸುಡುಮದ್ದು ದಾಸ್ತಾನು ಆರೋಪದಲ್ಲಿ ಸ್ಫೋಟಕ ಕಾಯ್ದೆ 1884, 9ಬಿ ಅಡಿಯಲ್ಲಿ ಕಟ್ಟಡ ಮಾಲಕ ಕರುಣಾಕರ ರೈಯವರ ವಿರುದ್ಧ ಪುತ್ತೂರು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ ಈ ಮಾಹಿತಿ ನೀಡಿದ್ದಾರೆ.
ದರ್ಬೆಯಲ್ಲಿ ಉದ್ಯಮಿ ಕರುಣಾಕರ ರೈ ಮಾಲಕತ್ವದ ಆರಾಧ್ಯ ಕಾಂಪ್ಲೆಕ್ಸ್ ನ ನೆಲ ಅಂತಸ್ತಿನ ಕೊಠಡಿಯಲ್ಲಿ ಶೇಖರಿಸಿಟ್ಟಿದ್ದ ಹಸಿರು ಪಟಾಕಿಗಳಿಗೆ ನ.1 ರಂದು ಸಂಜೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿತ್ತು.



























