ವಿಟ್ಲ: ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆ ಮಜಿಯಲ್ಲಿ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

ಧ್ವಜಾರೋಹಣ ನಡೆಸಿ ಮಕ್ಕಳು ಕನ್ನಡ ಗೀತೆಗಳನ್ನು ಹಾಡುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ನಾರಾಯಣ ಪೂಜಾರಿ ವಹಿಸಿ ರಾಜ್ಯೋತ್ಸವದ ಬಗ್ಗೆ ಮಾತನಾಡಿದರು. ಅತಿಥಿಗಳಾಗಿ ಪಂಚಾಯತ್ ಸದಸ್ಯರಾದ ಮೀನಾಕ್ಷಿ, ಶಿಕ್ಷಕರಾದ ಶಕುಂತಲಾ, ಸಿಸಿಲಿಯಾ, ರೇಖಾ, ಜಯಲಕ್ಷ್ಮಿ ,ಜಯಚಿತ್ರ, ಮೀನಾಕ್ಷಿ ,ಪ್ರೇಮಲತಾ ಭಾಗವಹಿಸಿದ್ದರು. ಸಂಗೀತ ಶರ್ಮ ನಿರೂಪಿಸಿದ ಕಾರ್ಯಕ್ರಮದಲ್ಲಿ, ಅನುಷಾ ಸ್ವಾಗತಿಸಿ, ಮುರ್ಷಿದಾ ಬಾನು ವಂದಿಸಿದರು.





























