ವಿಟ್ಲ: ರಸ್ತೆಯೊಂದು ತೀರಾ ಹದಗೆಟ್ಟು ಸಾರ್ವಜನಿಕರಿಗೆ ತೆರಳಲು ಆಗದ ಸ್ಥಿತಿಗೆ ತಲುಪಿರುವ ಘಟನೆ ವಿಟ್ಲದ ಜೋಗಿಮಠ-ಗಮಿಯಲ್ಲಿ ನಡೆದಿದೆ.

ಜೋಗಿಮಠ-ಗಮಿಗೆ ತೆರಳುವ ರಸ್ತೆಯು ತೀರಾ ಹದಗೆಟ್ಟಿದ್ದು, ಈ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಜೋಗಿಮಠ ಅಡ್ಡ ರಸ್ತೆ ಸದಸ್ಯರ ಮನೆಯ ಮುಂದೆ ಹೋಗುವ ರಸ್ತೆ ಇಲ್ಲಿ ಸಾರ್ವಜನಿಕರು ಹೋಗಲು ತುಂಬಾ ಕಷ್ಟಕರವಾಗಿದೆ. ಸಮಸ್ಯೆಯನ್ನು ಬಗೆ ಹರಿಸುವುದನ್ನು ಬಿಟ್ಟು ಸ್ಟೇಟಸ್ ಹಾಕಿ ಸಮರ್ಥಿಸಿಕೊಳ್ಳುತ್ತಾರೆ. ಕನಿಷ್ಠ ಸಣ್ಣ ಪ್ರಮಾಣದಲ್ಲಿ ರಿಪೇರಿ ಮಾಡಲು ಸಾಧ್ಯವಿಲ್ಲದ ಈ ಸದಸ್ಯರು ಮುಂದೆ ಯಾವ ಕೆಲಸವನ್ನು ಮಾಡುತ್ತಾರೆ. ಕೇವಲ ಹೆಸರಿಗಾಗಿ ಚುನಾವಣೆಗೆ ನಿಂತರೆ ಏನು ಪ್ರಯೋಜನವಿಲ್ಲ., ಸಮಸ್ಯೆಯನ್ನು ಬಗೆ ಹರಿಸಲು ಸ್ವಲ್ಪವೂ ಕೆಲಸ ಮಾಡುವುದಿಲ್ಲ. ಮೊದಲು ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಿ, ಕೆಲಸ ಮಾಡಿ ನಿಮ್ಮಿಂದ ಆಗುವುದಿಲ್ಲ ಎಂದಾದರೆ ಹೇಳಿ. ಅದಕ್ಕೆ ಮತದಾರರೇ ಉತ್ತರ ಕೊಡುತ್ತಾರೆ ಎಂದೆಲ್ಲಾ ಬರೆದು ಸಾರ್ವಜನಿಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ..




























