ಸುಳ್ಯ: ಹರಿಹರ ಪಲ್ಲತಡ್ಕದಲ್ಲಿ ಧಿಡೀರ್ ಆಗಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆದುಕೊಂಡಿದ್ದು, ಮದ್ಯ ಮಾರಾಟ ಮುಕ್ತ ಹೋರಾಟಗಾರರು ಅಂಗಡಿಯ ಮೆಟ್ಟಲಿನಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಮದ್ಯ ಮಾರಾಟ ಮುಕ್ತ ಹೋರಾಟಗಾರರು ಅಂಗಡಿಯ ಮೆಟ್ಟಲಿನಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದು, ಅಕ್ರಮ ಮದ್ಯದಂಗಡಿ ತೆರವು ಮಾಡಬೇಕೆಂದು ಆಗ್ರಹಿಸಿದರು. ಅಬಕಾರಿ ಡಿ.ಸಿ. ತೆರವುಗೊಳಿಸಲು ಹೇಳಿದರೆ ಮಾತ್ರ ತೆರವು ಮಾಡುವುದಾಗಿ ಬಾರ್ ನವರು ತಿಳಿಸಿದ್ದು, ಆಗ ಅಲ್ಲಿದ್ದ ಕೆಲವರು ಅಂಗಡಿಗೆ ನುಗ್ಗಲು ಯತ್ನಿಸಿದ್ದು, ಬೋರ್ಡ್ ಕಿತ್ತೆಸೆಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಪರಸ್ಪರ ತಳ್ಳಾಟ ನಡೆದಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎಂದು ತಿಳಿದು ಬಂದಿದೆ.


























