ಸುಳ್ಯ: ಹರಿಹರ ಪಲ್ಲತಡ್ಕದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಎರಡನೇ ದಿನವೂ ತೆರೆದಿದ್ದು, ಮದ್ಯದಂಗಡಿ ವಿರುದ್ಧ ಮದ್ಯ ಮಾರಾಟ ಮುಕ್ತ ಹೋರಾಟ ಗ್ರಾಮ ಸಮಿತಿ ನೇತೃತ್ವದಲ್ಲಿ ಧರಣಿ ಇಂದು ಮುಂದುವರೆದಿದೆ.

ಹರಿಹರ ಜಂಕ್ಷನ್ ನಲ್ಲಿ ಹಲವಾರು ಮಂದಿ ಸಾರ್ವಜನಿಕರು ಸೇರಿ ಘೋಷಣೆ ಕೂಗುತ್ತಾ ಬಾರ್ ಬಳಿ ತೆರಳಲು ಅನುವಾದರು. ಆದರೇ ಅದಕ್ಕೆ ಪೊಲೀಸರು ಅನುವು ಮಾಡಿ ಕೊಡಲಿಲ್ಲ. ಬಳಿಕ ಹೋರಾಟಗಾರರು ಬಾರ್ ಗೆ ಹೋಗುವ ರಸ್ತೆಯ ಬಳಿ, ಮುಖ್ಯ ರಸ್ತೆಯ ಹತ್ತಿರ ಧರಣಿ ಮುಂದುವರೆಸಿದ್ದಾರೆ.

ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಪುರುಷರು, ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಡಿವೈಎಸ್ಪಿ, ಸುಳ್ಯದ ಸರ್ಕಲ್, ಸುಳ್ಯದ ಎಸ್ಐ, ಸುಬ್ರಹ್ಮಣ್ಯ ಎಸ್ಐ, ಒಂದು ಪೊಲೀಸ್ ತುಕಡಿ ಸೇರಿ 50ಕ್ಕೂ ಮಿಕ್ಕಿ ಪೋಲಿಸರು ಸ್ಥಳದಲ್ಲಿ ಉಪಸ್ಥಿತರಿದ್ದು, ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸುತ್ತಿದ್ದಾರೆ..



























