ವೈದ್ಯರ ಸಲಹೆಯ ಮೇರೆಗೆ ಆರೋಗ್ಯ ಚಿಕಿತ್ಸೆಯ ಕಾರಣ 10 ದಿನಗಳ ತನಕ ಯಾವುದೇ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ರವರು ತಿಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ಸಂಕಲ್ಪ ಯಾತ್ರೆಯ ರಾಜ್ಯ ಪ್ರವಾಸ ಸಹಿತ ಪಕ್ಷದ ವಿವಿಧ ಚಟುವಟಿಕೆಗಳು ಮುಖಂಡರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಸಾಗುತ್ತಿದೆ’.
‘ವೈದ್ಯರ ಸಲಹೆಯ ಮೇರೆಗೆ ಆರೋಗ್ಯ ಚಿಕಿತ್ಸೆಯ ಕಾರಣ 10 ದಿನಗಳ ತನಕ ಯಾವುದೇ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುವುದಿಲ್ಲ’., ಆದಷ್ಟು ಶೀಘ್ರದಲ್ಲಿ ಪಕ್ಷ, ಕ್ಷೇತ್ರದ ಸೇವೆಗೆ ಮರಳುತ್ತೇನೆ’, ಎಂದು ತಿಳಿಸಿದ್ದಾರೆ.



























