ಪುತ್ತೂರು: ಸಾಮರಸ್ಯ ವೇದಿಕೆ ಸವಣೂರು ಮಂಡಲದ ವತಿಯಿಂದ ದೀಪಾವಳಿ ಪ್ರಯುಕ್ತ ‘ತುಡಾರ್ ಕಾರ್ಯಕ್ರಮ’ ನ.7 ರಂದು ಪುಣ್ಚಪ್ಪಾಡಿ ಗ್ರಾಮದ ಸೋಂಪಾಡಿ ಸೇವಾ ಬಸ್ತಿಯಲ್ಲಿ ಸಂಜೆ 6.30 ಕ್ಕೆ ನಡೆಯಲಿದೆ.
ದೀಪಾವಳಿ ಹಬ್ಬದ ವಿಶೇಷ ಕಾರ್ಯಕ್ರಮವಾಗಿ ಸವಣೂರು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಿಂದ ಸಂಜೆ 5.30ಕ್ಕೆ ‘ತುಡಾರ್’ (ದೀಪ) ಪ್ರಜ್ವಲಿಸಿ ಮೆರವಣಿಗೆ ಮೂಲಕ ಸವಣೂರು ಗ್ರಾಮದ ಶಾಂತಿನಗರ ಅಂಬೇಡ್ಕರ್ ಭವನದ ಬಳಿಯಿಂದ ಸೋಂಪಾಡಿ ಸೇವಾ ಬಸ್ತಿ ತಲುಪಿ ಮನೆಗಳಲ್ಲಿ ದೀಪ ಬೆಳಗಿಸುವುದು.
ಮೆರವಣಿಗೆಯು ಗೊಂಬೆ, ವಾದ್ಯ ಚೆಂಡೆ, ಶಂಖ ಜಾಗಟೆಯೊಂದಿಗೆ ಸಾಗಲಿರುವುದು, ನಂತರ ಭಜನೆ, ಗೋಪೂಜೆ, ದೀಪ, ದೊಂದಿ ಬೆಳಗಿಸುವಿಕೆ, ಸಭಾ ಕಾರ್ಯಕ್ರಮ, ಸಹಭೋಜನ, ಪಟಾಕಿಯೊಂದಿಗೆ ವಿಶೇಷವಾಗಿ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























