ವಿಟ್ಲ: ಅಪಘಾತ ಪ್ರಕರಣವೊಂದರ ಆರೋಪಿಯಾಗಿದ್ದು, ಕಳೆದ 9 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ದಂಡಿಗನ ಹೋಬಳಿಯ ದೊಡ್ಡಕೆರೆ ದೇರುಹಳ್ಳಿ ಮನೆ ವಸಂತ ಡಿ.ಹೆಚ್. ಬಂಧಿತ ಆರೋಪಿ.

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೊಂಡು 2013ನೇ ಸಾಲಿನಲ್ಲಿ ನ್ಯಾಯಾಲಯವು 1 ವರ್ಷ ಸಜೆಯನ್ನು ವಿಧಿಸಿತ್ತು. ಆದರೆ ಆರೋಪಿ ಸುಮಾರು 9 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

























