ವಿಟ್ಲ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ ಯುವಕನೋರ್ವನನ್ನು ಅದೇ ಗ್ರಾಮದ ನಿವಾಸಿ ಅನೈತಿಕ ಚಟುವಟಿಕೆಗಾಗಿ ಗುಡ್ಡಕ್ಕೆ ಕರೆದುಕೊಂಡು ಬಂದು ಸುಟ್ಟು ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೋಳಂತೂರು ನಿವಾಸಿ ಅದ್ದು ಯಾನೆ ಅದ್ರಾಮ ಬಂಧಿತ ಆರೋಪಿ.
ಬಂಟ್ವಾಳ-ವಿಟ್ಲ ಠಾಣಾ ವ್ಯಾಪ್ತಿಯ ಗಡಿ ಭಾಗದ ಸುರಿಬೈಲು ನಿವಾಸಿ ಸಪ್ಪಿ (ಸಮಾದ್) (19) ಮೃತ ಯುವಕ.
ಅದ್ರಾಮ ಸಲಿಂಗಕಾಮಿಯಾಗಿದ್ದು, ಮಂಚಿ, ಇರಾ, ಮುಡಿಪು ರಸ್ತೆಯ ನಿರ್ಜನ ಪ್ರದೇಶದ ಗುಡ್ಡದಲ್ಲಿ ಪೆಟ್ರೋಲ್ ಸುರಿದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ್ದು, ಈ ಬಗ್ಗೆ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಂಟ್ವಾಳ ಮತ್ತು ವಿಟ್ಲ ತನಿಖೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.




























