ಪುತ್ತೂರು: ತಾಲೂಕು ಪಡೀಲ್ ನಗರಸಭಾ ಸದಸ್ಯರಾದ ಪದ್ಮನಾಭ ನಾಯ್ಕ್ ಮತ್ತು ಲೀಲಾ ಪದ್ಮನಾಭ ರವರ ಪುತ್ರಿ ಪೂಜಾ ರವರ ನಿಶ್ಚಿತಾರ್ಥ ಕಾರ್ಯಕ್ರಮವು ಶಿರಸಿಯ ಲಕ್ಷ್ಮಣ ಹೆಚ್ ಮತ್ತು ಯಶೋಧಾ ಲಕ್ಷ್ಮಣ್ ರವರ ಪುತ್ರ ಕಾರ್ತಿಕ್ ಕುಮಾರ್ ರವರೊಂದಿಗೆ ನ.6 ರಂದು ಅಶ್ವಿನಿ ಹೋಟೆಲ್ ನ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು , ದಿಶಾ ಸಮಿತಿಯ ಸದಸ್ಯರಾದ ರಾಮದಾಸ್ ಹಾರಾಡಿ, ನಗರಮಂಡಲದ ಉಪಾಧ್ಯಕ್ಷ ಹಾಗೂ ಉದ್ಯಮಿ ಸುಧೀರ್ ಶೆಟ್ಟಿ ತೆಂಕಿಲ, ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಸದಸ್ಯರಾದ ಶೀನಪ್ಪ ನಾಯ್ಕ್, ಶಿವರಾಮ್ ಸಪಲ್ಯ, ಶಶಿಕಲಾ ಹೂವಯ್ಯ, ಪ್ರೇಮಲತಾ ನಂದಿಲ, ಯಶೋದ ಬಿರವು, ಲೀಲಾವತಿ ಕೃಷ್ಣನಗರ,ಮನೋಹರ್ ಕಲ್ಲಾರೆ, ಬೂತ್ ಅಧ್ಯಕ್ಷರಾದ ಸುಕೀರ್ತಿ ರವೀಂದ್ರನಾಥ್ ಪಡೀಲ್, ವಿಠ್ಠಲ ದಾಸ್ ಆಚಾರ್, ನಿತೀಶ್ ನಾಯ್ಕ್ ಪಡೀಲ್, ಕಾರ್ಯದರ್ಶಿ ವಿಜಯ ದಂಪತಿ ಪಡೀಲ್ ಹಾಗೂ ವಸಂತ ದಂಪತಿ ಬದಿಯಡ್ಕ, ರವೀಂದ್ರನಾಥ್ ಪಡೀಲ್, ಮಹಾಬಲ ದಂಪತಿಗಳು ಕೃಷ್ಣನಗರ, ಎಲ್ಐಸಿ ಉದ್ಯೋಗಿಗಳು ಹಾಗೂ ಕುಟುಂಬಸ್ಥರು ಭಾಗವಹಿಸಿ ಶುಭಹಾರೈಸಿದರು..


























