ವಿಟ್ಲ: ಕಬಕ-ವಿಟ್ಲ ರಸ್ತೆ ಅಗಲೀಕರಣ ಮರುಡಾಮರೀಕರಣ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮವು ನ.12 ರಂದು ನಡೆಯಲಿದೆ.
ಸುಮಾರು 13 ಕೋಟಿ ರೂ. ವೆಚ್ಚದಲ್ಲಿ ಕಬಕ-ವಿಟ್ಲ ರಸ್ತೆ ಅಗಲೀಕರಣ ಮರುಡಾಮರೀಕರಣ ಕಾಮಗಾರಿಯು ನಡೆಯಲಿದ್ದು, ಈವರೆಗೆ ಐದೂವರೆ ಮೀಟರ್ ಇದ್ದ ರಸ್ತೆ ಕಾಮಗಾರಿಯ ನಂತರ ಏಳೂವರೆ ಮೀಟರ್ ನಷ್ಟು ಅಗಲೀಕರಣವಾಗಲಿದೆ.
ಕಬಕ-ವಿಟ್ಲ ಸಂಪರ್ಕಿಸುವ ರಸ್ತೆ ಇದಾಗಿದ್ದು, ಎರಡು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ರಸ್ತೆಯಾಗಿದೆ. ಪುತ್ತೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 7 ಕಿ.ಮೀ ಮತ್ತು ಉಳಿದ ಭಾಗಗಳೆಲ್ಲಾ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಸೇರಿದ್ದಾಗಿದೆ.
ಈ ರಸ್ತೆಯ ಶಿಲಾನ್ಯಾಸ ಕಾರ್ಯಕ್ರಮ ನ.12 ರಂದು ಬೆಳಗ್ಗೆ ನಡೆಯಲಿದೆ. ಶಾಸಕ ಸಂಜೀವ ಮಠoದೂರು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಹಲವು ಗಣ್ಯರು ಆಗಮಿಸಲಿದ್ದಾರೆ.