ಪುತ್ತೂರು: ಜೇಸಿಐ ಭಾರತದ ವಲಯ 15ರ ಪುತ್ತೂರು ಘಟಕದ 2023ನೇ ಸಾಲಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ, ಜೇಸಿಐ ಅಡ್ಮಿನ್ ಹಾಲ್ ಪುತ್ತೂರಿನಲ್ಲಿ ಜರುಗಿತು.

ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಡಲು ಸ್ವಾತಿ ಜೆ. ರೈ, ವೇಣುಗೋಪಾಲ್ ಎಸ್. ಜೆ ಹಾಗೂ ಗೌತಮ್ ರೈ ರವರು ಆಗಮಿಸಿ, ಚುನಾವಣಾ ಕಾರ್ಯ ನಿರ್ವಹಣೆಯನ್ನು ನಡೆಸಿಕೊಟ್ಟರು.
ಅಧ್ಯಕ್ಷರಾಗಿ ಸುಹಾಸ್ ಮರಿಕೆ, ಕಾರ್ಯದರ್ಶಿಯಾಗಿ ಕಾರ್ತಿಕ್ ಬಿ., ಕೋಶಾಧಿಕಾರಿಯಾಗಿ ಮನೋಹರ್ ಆಯ್ಕೆಯಾಗಿದ್ದಾರೆ.
ಸುಸುಮಾರು 50 ವರ್ಷ ಇತಿಹಾಸವುಳ್ಳ ಏಕೈಕ ಘಟಕ ಇದಾಗಿದ್ದು, 2023ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.
ಈ ಸಂದರ್ಭದಲ್ಲಿ ಘಟಕದ ಪೂರ್ವಾಧ್ಯಕ್ಷರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು..


























