ಕಾಂತಾರ ಸಿನಿಮಾದ ವರಾಹ ರೂಪಂ ಹಾಡನ್ನು ಕಾಪಿ ಮಾಡಲಾಗಿದೆ ಎನ್ನುವ ವಿಚಾರ ಹಲವು ದಿನಗಳಿಂದ ಸದ್ದು ಮಾಡುತ್ತಿದೆ. ನಮ್ಮ ಹಾಡನ್ನು ಕಾಪಿ ಮಾಡಲಾಗಿದೆ ಎಂದು ಮಲಯಾಳಂ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಕಂಪನಿಯು ಹೇಳಿತ್ತು. ನ್ಯಾಯಾಲಯಕ್ಕೂ ದೂರು ಸಲ್ಲಿಕೆಯಾಗಿತ್ತು. ಆದರೆ, ನಿರ್ದೇಶಕ ರಿಷಬ್ ಶೆಟ್ಟಿ ಅದಕ್ಕೆ ಒಪ್ಪಿರಲಿಲ್ಲ. ನವರಸಮ್ ಆಲ್ಬಂನಿಂದ ಕದ್ದಿಲ್ಲ ಎಂದೇ ಹೇಳುತ್ತಾ ಬಂದಿದ್ದರು. ಆದರೆ, ನಿನ್ನೆ ನಿರ್ಮಾಣ ಸಂಸ್ಥೆಯ ಯೂಟ್ಯೂಬ್ ಚಾನೆಲ್ ನಿಂದ ಹಾಡನ್ನು ಡಿಲೀಟ್ ಮಾಡಲಾಗಿದೆ.
ವರಾಹ ರೂಪಂ ಹಾಡಿನ ಕಾಪಿರೈಟ್ ವಿವಾದದ ಹಿನ್ನಲೆ ಇದೀಗ ವರಾಹ ರೂಪಂ ಹಾಡನ್ನು ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ನಿಂದ ತೆಗೆದು ಹಾಕಿದೆ.
ಮಾತ್ರಭೂಮಿ ಪ್ರಿಂಟಿಂಗ್ ಮತ್ತು ಪಬ್ಲಿಶಿಂಗ್ ಕಂಪೆನಿ ವರಾಹ ರೂಪಂ ಹಾಡಿಗೆ ಕಾಪಿರೈಟ್ ನ್ನು ಕ್ಲೈಮ್ ಮಾಡಿದ ಹಿನ್ನಲೆ ಇದೀಗ ಹೊಂಬಾಳೆ ಫಿಲ್ಮ್ಸ್ ನ ಯೂಟ್ಯೂಬ್ ಚಾನೆಲ್ ನಿಂದ ಈ ಹಾಡನ್ನು ತೆಗೆದು ಹಾಕಿದೆ.
ಈ ನಡುವೆ ಥೈಕುಡಂ ಬ್ರಿಡ್ಜ್ ಸಂಗೀತ ಬ್ಯಾಂಡ್ನ ಅನುಮತಿಯಿಲ್ಲದೇ ‘ವರಾಹ ರೂಪಂ’ ಹಾಡನ್ನು ಪ್ರಸಾರ ಮಾಡುವಂತಿಲ್ಲ ಎಂದು ‘ಕಾಂತಾರ’ ಚಿತ್ರತಂಡಕ್ಕೆ ಕೇರಳದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿರ್ಬಂಧ ಹೇರಿದ್ದು, ಥಿಯೇಟರ್ಗಳಲ್ಲಿ ಹಾಗೂ ಸ್ಟ್ರೀಮಿಂಗ್ ಪ್ಲಾಟ್ಫಾರಂಗಳಲ್ಲಿ ಈ ಹಾಡಿನ ಪ್ರಸಾರವನ್ನು ಸ್ಥಗಿತಗೊಳಿಸುವಂತೆ ಈಗಾಗಲೇ ನ್ಯಾಯಾಲಯ ಆದೇಶಿಸಿದೆ.
‘ಕಾಂತಾರ’ ಸಿನಿಮಾದಲ್ಲಿನ ವರಾಹ ರೂಪಂ ಹಾಡಿನ ಕೆಲವು ಭಾಗಗಳನ್ನು ನಮ್ಮ ಒರಿಜಿನಲ್ “ನವರಸಂ’ ಹಾಡಿನಿಂದ ನೇರವಾಗಿ ಎತ್ತಲಾಗಿದೆ ಎಂದು ಆರೋಪಿಸಿ ಥೈಕುಡಂ ಬ್ರಿಡ್ಜ್ ಸಂಗೀತ ಬ್ಯಾಂಡ್ ಕೇರಳದ ಕೋರ್ಟ್ ಮೆಟ್ಟಿಲೇರಿತ್ತು.


























