ವಿಟ್ಲ: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಜಾನುವಾರು ಸಹಿತ ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ ಘಟನೆ ಬಂಟ್ವಾಳ ಮತ್ತು ವಿಟ್ಲದಲ್ಲಿ ನಡೆದಿದೆ.
ತೆಂಕಬೆಳ್ಳೂರು ಎಂಬಲ್ಲಿ ಅಕ್ರಮವಾಗಿ ಟೆಂಪೋದಲ್ಲಿ ಕರು ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಕರು ಸಹಿತ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಲ್ಲಗುಡ್ಡೆಯಿಂದ ಅಮ್ಮುಂಜೆಗೆ ಕರು ಸಾಗಿಸುತ್ತಿದ್ದ ವೇಳೆ ತೆಂಕಬೆಳ್ಳೂರು ಎಂಬಲ್ಲಿ ತಡೆದ ಕಾರ್ಯಕರ್ತರು ಆರೋಪಿಗಳಾದ ಗೋಪಾಲ್ ಹಾಗೂ ರಫೀಜ್ ಎಂಬವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ.
ವಿಟ್ಲದಲ್ಲಿಯೂ ದಾಳಿ ನಡೆಸಿದ ಸಂಘಟನೆ ಕಾರ್ಯಕರ್ತರು ಕರು ಸಹಿತ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಹಮ್ಮದ್ ಹಾಗೂ ಮಸೂದ್ ಎಂಬ ಇಬ್ಬರು ಅಕ್ರಮವಾಗಿ ಜಾನುವಾರುವನ್ನು ಸಾಗಿಸುತ್ತಿದ್ದ ವೇಳೆ ಕನ್ಯಾನ ಎಂಬಲ್ಲಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ..




























