ಪುತ್ತೂರು: ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ವಿಷ್ಣುಮೂರ್ತಿ ದೈವಸ್ಥಾನ ಸಮೀಪ ದೈವಸ್ಥಾನದ ಪಟ್ಟಾ ಜಾಗದಲ್ಲಿ ನಿರ್ಮಾಣಗೊಂಡಿರುವ ನೂತನ ರಸ್ತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು ಪುಷ್ಪ ಪುರಂದರ ಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ಬೂಡಿಯರು ರಾಧಾಕೃಷ್ಣ ರೈ ತೆಂಗಿನಕಾಯಿ ಒಡೆದು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷರು ಪಂಚಾಯತ್ ಅನುದಾನದಲ್ಲಿ ರಸ್ತೆಗೆ ಕಾಂಕ್ರೀಟ್ ಮಾಡಿಸಿ ಕೊಡುವ ಭರವಸೆ ನೀಡಿದರು. ಮುಂದೆ ಈ ರಸ್ತೆಯನ್ನು ಬದಿಯಡ್ಕ ಸಂಪರ್ಕ ರಸ್ತೆ ಯನ್ನಾಗಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಆಗಲು ಪಂಚಾಯತ್ ನಿಂದ ಸಹಕಾರ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ಬೂಡಿಯರು ರಾಧಾಕೃಷ್ಣ ರೈ, ಗ್ರಾಮ ಪಂಚಾಯತ್ ಸದಸ್ಯರು ಯಶೋದಾ. ಅಶೋಕ್ ಪುತ್ತಿಲ,ವಿಷ್ಣುಮೂರ್ತಿ ದೈವಸ್ಥಾನ ದ ಅಧ್ಯಕ್ಷ ಭಾಸ್ಕರ ಆಚಾರ್. ಕಾರ್ಯದರ್ಶಿ ಪಟ್ಟೆ ಸದಾಶಿವ ಶೆಟ್ಟಿ. ಅನಿಲ್ ಕಣ್ಣರ್ನೋಜಿ, ಸುಧೀರ್ ಶೆಟ್ಟಿ ನೇಸರ, ಪಟ್ಟೆ ಉಮ್ಮರ್, ಪಟ್ಟೆ ಇಸುಬು, ಇಬ್ರಾಹಿಂ. ಸೀನಪ್ಪ ಪೂಜಾರಿ ಮುಲಾರ್. ಸೇಸಪ್ಪ ಶೆಟ್ಟಿ ಪೋನೋನಿ, ಶ್ರೀಕಾಂತ್ ಆಚಾರ್, ಪ್ರವೀಣ್ ಮುಲಾರ್.ದೇವದಾಸ್, ಜೀವೇಂದ್ರ ಮುಲಾರ್,ಲಲಿತ ಶೆಟ್ಟಿ, ಮಂಜು, ಚೇತನ್, ಸೀನ ಅಜಾಲಾಡಿ, ಸುರೇಶ್ ಕುರಿಯ, ಚಂದ್ರಹಾಸ್ ಸೇರಿದಂತೆ ರಸ್ತೆ ಫಲನುಭವಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.































