ವಿಟ್ಲ: ಆಟೋ ಚಾಲಕನೋರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ಬೋಳಂತೂರು ಸಮೀಪದ ನಾಡಾಜೆಯಲ್ಲಿ ನಡೆದಿದೆ.
ಬೋಳಂತೂರು ಸಮೀಪದ ಗುಳಿ ನಿವಾಸಿ ಅಬೂಬಕ್ಕರ್ ಪುತ್ರ
ಆಟೋ ಚಾಲಕ ಶಾಕೀರ್(30) ಹಲ್ಲೆಗೊಳಗಾದ ಆಟೋ ಚಾಲಕ.
ಕಬಡ್ಡಿ ಮ್ಯಾಚ್ ಮುಗಿಸಿ ರಾತ್ರಿ 2 ಗಂಟೆಯ ಬಳಿಕ ಮನೆಗೆ
ಹಿಂತಿರುಗುತ್ತಿದ್ದ ಶಾಕೀರ್ ನನ್ನು ಬೋಳಂತೂರು ಸಮೀಪದ
ನಾಡಾಜೆ ರಸ್ತೆಯಲ್ಲಿ ತಡೆದು ನಾಲ್ವರು ತಲವಾರಿನಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ದಾಳಿಯ ನಂತರ ನಾಲ್ವರು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗೊಂಡ ಶಾಕೀರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.


























